
ರುಚಿಯಾಗಿರೋ ಪೇಸ್ಟ್ರಿ ಬಹಳ ಜನರಿಗೆ ಇಷ್ಟ. ಕೆಲವರು ಇದನ್ನು ಬೆಳಗ್ಗೆ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಹಾರಕ್ಕೆ ಸೇವಿಸುವುದು ಒಳ್ಳೆಯದಲ್ಲ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಪೇಸ್ಟ್ರಿಯಲ್ಲಿ ಕ್ರಿಯಾಶೀಲ ಈಸ್ಟ್ ಇರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ತುಂಬಿದಂತೆನಿಸುತ್ತದೆ. ಪೇಸ್ಟ್ರಿಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಯಕೃತ್ತಿಗೆ ಹಾನಿಯಾಗುತ್ತದೆ.
ಪೇಸ್ಟ್ರಿ ಮಾತ್ರವಲ್ಲದೆ ಕಿತ್ತಳೆ ಹಣ್ಣು, ಬಾಳೆಹಣ್ಣು, ಸೌತೆಕಾಯಿ, ಟೊಮಾಟೋ ಮುಂತಾದ ಹಸಿ ತರಕಾರಿ ಹಾಗೂ ಸ್ಟೋರ್ ಆಗಿರುವ ಜ್ಯೂಸ್ ಬೆಳಗಿನ ತಿಂಡಿಯಾಗಿ ಸೇವಿಸಬಾರದು.