ಸಂಗಾತಿ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ, ಮುನಿಸು ಸಂಬಂಧವನ್ನು ಹಾಳು ಮಾಡುತ್ತದೆ. ಆದ್ರೆ ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಗಲಾಟೆ ವೇಳೆ ಇಲ್ಲಿಗೆ ಸಂಬಂಧ ಸಾಕು ಎಂಬ ಭಾವನೆ ಬರುತ್ತದೆ.
ಈ ವೇಳೆ ಮನಸ್ಸನ್ನು ಶಾಂತಗೊಳಿಸಿಕೊಂಡು ಆಲೋಚನೆ ಮಾಡುವುದು ಒಳ್ಳೆಯದು. ಸಂಬಂಧ ಬೆಳೆಸುವುದು ಕಷ್ಟ. ಮುರಿದು ಹಾಕುವುದು ಅರೆ ಕ್ಷಣದ ಕೆಲಸ. ಕೆಲ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ಅದ್ರಲ್ಲಿ ಬಹುತೇಕ ಪ್ರಶ್ನೆಗಳಿಗೆ ಯಸ್ ಎಂಬ ಉತ್ತರ ಬಂದ್ರೆ ಮಾತ್ರ ಬ್ರೇಕ್ ಅಪ್ ಗೆ ಮುಂದಾಗಿ.
ನಿಮ್ಮ ಸಂಗಾತಿ ನಿಮಗೆ ಮೋಸ ಮಾಡ್ತಿದ್ದಾನಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ. ಕೆಲವರು ಒಂದೇ ಬಾರಿ ಇಬ್ಬರ ಜೊತೆ ಸಂಬಂಧ ಹೊಂದಿರುತ್ತಾರೆ. ಇನ್ನೊಬ್ಬರ ಜೊತೆ ಸಂಗಾತಿ ಸಂಬಂಧ ಹೊಂದಿದ್ದಾರಾ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅನುಮಾನ ಪಟ್ಟು ಬ್ರೇಕ್ ಅಪ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಸ್ಪಷ್ಟವಾದ್ರೆ ಮಾತ್ರ ನಿರ್ಧಾರ ತೆಗೆದುಕೊಳ್ಳಿ.
ಬ್ರೇಕ್ ಅಪ್ ನಂತ್ರ ಪಶ್ಚಾತಾಪವಾಗುವಂತಿದ್ದರೆ, ಯಾಕೆ ಈ ನಿರ್ಧಾರ ತೆಗೆದುಕೊಂಡೆ ಎಂಬ ನೋವು ನಿಮ್ಮನ್ನು ಕಾಡಿದ್ರೆ, ಸಂಗಾತಿ ಇರದೆ ಇರೋದು ಕಷ್ಟ ಎಂದಾದ್ರೆ ಬ್ರೇಕ್ ಅಪ್ ನಿರ್ಧಾರ ಬೇಡ. ಇಲ್ಲ ಯಾವುದೇ ಪಶ್ಚಾತಾಪವಿಲ್ಲ. ನಾನು ಸರಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಾದ್ರೆ ಮಾತ್ರ ಬ್ರೇಕ್ ಅಪ್ ಗೆ ಮುಂದಾಗಿ.
ಇತ್ತೀಚಿನ ದಿನಗಳಲ್ಲಿ ಬ್ರೇಕ್ ಅಪ್ ಗೆ ಮುಖ್ಯ ಕಾರಣ ಸಮಯವಾಗ್ತಿದೆ. ಸಮಯವಿಲ್ಲದ ಕಾರಣ ಸಂಗಾತಿ ಭೇಟಿ ಸಾಧ್ಯವಾಗುವುದಿಲ್ಲ. ಆಸಕ್ತಿಯಿಲ್ಲದವರು ಸಮಯದ ಸುಳ್ಳು ನೆಪವನ್ನು ಕೂಡ ಹೇಳ್ತಾರೆ. ನಿಮ್ಮ ಸಂಗಾತಿ ಕೂಡ ಸುಳ್ಳು ನೆಪ ಹೇಳ್ತಿದ್ದರೆ ನಿಮ್ಮ ಮೇಲೆ ಆಸಕ್ತಿಯಿಲ್ಲ ಎಂದರ್ಥ.
ಆರಂಭದಲ್ಲಿ ಇಬ್ಬರ ಮಧ್ಯೆ ಪ್ರೀತಿ, ವಿಶ್ವಾಸ ಸಾಕಷ್ಟಿರುತ್ತದೆ. ದಿನ ಕಳೆದಂತೆ ಸಂಗಾತಿಯ ಅಪಹಾಸ್ಯಕ್ಕೆ ನೀವು ಗುರಿಯಾಗ್ತೀರ. ಯಾವುದೋ ಒತ್ತಡಕ್ಕೆ ಮಣಿದು ಸಂಗಾತಿ ಪ್ರೀತಿ ನಾಟಕವಾಡ್ತಾನೆ. ಗೌರವಕ್ಕೆ ಧಕ್ಕೆತರುವ ಕೆಲಸ ಮಾಡುತ್ತಾನೆ. ಇಂಥ ಸಂದರ್ಭದಲ್ಲಿ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಬದಲು ತಿರಸ್ಕಾರವಿದೆಯಾ ಎಂಬುದನ್ನು ತಿಳಿಯಿರಿ. ಉತ್ತರ ಎಸ್ ಎಂದಾದ್ರೆ ತಕ್ಷಣ ಬ್ರೇಕ್ ಅಪ್ ನಿರ್ಧಾರ ತೆಗೆದುಕೊಳ್ಳಿ.