alex Certify ಬ್ರೇಕ್ ಅಪ್ ಆಗಿದೆಯಾ….? ನೋವಿನಿಂದ ಹೊರಬರಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕ್ ಅಪ್ ಆಗಿದೆಯಾ….? ನೋವಿನಿಂದ ಹೊರಬರಲು ಹೀಗೆ ಮಾಡಿ

ಹೃದಯದಲ್ಲಿ ಚಿಗುರಿದ ಪ್ರೀತಿಯನ್ನು ಚಿವುಟಿ ಹಾಕೋದು ಬಹಳ ಕಷ್ಟ. ಅನೇಕ ವರ್ಷಗಳಿಂದ ಒಟ್ಟಿಗಿರುವವರು ಯಾವುದೋ ಸಣ್ಣ ಕಾರಣಕ್ಕೆ ದೂರವಾಗಿಬಿಡ್ತಾರೆ. ಪ್ರೀತಿಯಿಂದ ದೂರವಾಗಿ ಸಾಮಾನ್ಯರಂತೆ ಜೀವನ ನಡೆಸೋದು ಕಷ್ಟವಾಗುತ್ತದೆ. ಎಷ್ಟು ಪ್ರಯತ್ನಪಟ್ಟರೂ ಹಳೇ ಪ್ರೀತಿ ಮತ್ತೆ ಮತ್ತೆ ಬಂದು ಕಾಡುತ್ತೆ. ಹಾಗಂತ  ಬ್ರೇಕ್ ಅಪ್ ಮಾಡಿಕೊಂಡವರೆಲ್ಲ ನಿಂತ ನೀರಾಗಲು ಸಾಧ್ಯವಿಲ್ಲ. ಹಳೆ ಪ್ರೀತಿ ಮರೆತು ಮುಂದೆ ಹೋಗಲೇಬೇಕು.

ಸಂಗಾತಿಯ ತಪ್ಪಾ? ನನ್ನ ತಪ್ಪಾ? ಎಂಬುದನ್ನು ಬ್ರೇಕ್ ಅಪ್ ನಂತ್ರ ಯೋಚನೆ ಮಾಡಬೇಡಿ. ಯಾಕೆಂದ್ರೆ ಈ ಯೋಚನೆ ನಿಮ್ಮ ನೋವನ್ನು ಹೆಚ್ಚು ಮಾಡುತ್ತದೆ.

BIG NEWS: ಒಬ್ಬರ ಕೈಯಲ್ಲಿ ಬಾರುಕೋಲು, ಮತ್ತೊಬ್ಬರ ಕೈಯಲ್ಲಿ ಹಗ್ಗ; ಇವರೆಲ್ಲ ಬೆಂಜ್ ಕಾರ್ ಗಿರಾಕಿಗಳು; ಸಿದ್ದು, ಡಿಕೆಶಿ ವಿರುದ್ಧ ಸಿಎಂ ವಾಗ್ದಾಳಿ

ಕೆಲವರ ಕೋಪ, ನೋವು ಎಲ್ಲವೂ ದುಃಖದ ಮೂಲಕ ಹೊರಬರುತ್ತದೆ. ನೀವು ಅಂತವರಲ್ಲಿ ಒಬ್ಬರಾಗಿದ್ದರೆ ಬ್ರೇಕ್ ಅಪ್ ನಂತ್ರ ಮನಸ್ಸು ಬಿಚ್ಚಿ ಅತ್ತು ಬಿಡಿ. ಕಣ್ಣೀರಿನ ನಂತ್ರ ಮನಸ್ಸಿನ ನೋವು ಕಡಿಮೆಯಾಗುತ್ತದೆ.

ಬ್ರೇಕ್ ಅಪ್ ಆದ್ಮೇಲೆ ಎಲ್ಲವೂ ಮುಗಿಯಲಿಲ್ಲ. ನಿಮ್ಮ ಸ್ನೇಹಿತರನ್ನು ಭೇಟಿ ಮಾಡಿ. ಅವ್ರ ಜೊತೆ ಸಮಯ ಕಳೆಯಿರಿ.

ಕುಟುಂಬಸ್ಥರ ಜೊತೆ ಬೆರೆಯಿರಿ. ಅವ್ರಿಗೆ ಹೆಚ್ಚಿನ ಸಮಯ ನೀಡಿ. ಅವ್ರ ಜೊತೆ ಮಾತನಾಡಿ.

ಅಜೀರ್ಣ, ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’

ಹಳೆ ಪ್ರೇಮಕ್ಕೆ ಮೊಬೈಲ್ ಶತ್ರು. ಹಾಗಾಗಿ ಮೊಬೈಲ್ ನಲ್ಲಿರುವ ಹಳೆ ಫೋಟೋ, ಸಂದೇಶವನ್ನು ಡಿಲಿಟ್ ಮಾಡಿ.

ಪ್ರೇಮಿ ನೀಡಿದ ಉಡುಗೊರೆಯನ್ನು ಎಸೆದುಬಿಡುವುದು ಒಳ್ಳೆಯದು. ಯಾಕೆಂದ್ರೆ ಅದನ್ನು ನೋಡಿದ ತಕ್ಷಣ ಹಳೆ ನೆನಪುಗಳು ನಿಮ್ಮನ್ನು ಕಾಡುತ್ತವೆ.

ಸ್ನೇಹಿತರು ಅಥವಾ ಕುಟುಂಬಸ್ಥರ ಜೊತೆ ಒಂದೊಳ್ಳೆ ಪ್ರವಾಸಕ್ಕೆ ಹೋಗಿ ಬನ್ನಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...