ಆರೋಗ್ಯವಂತ ದೇಹ ಬೇಕು ಅನ್ನೋ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಉತ್ತಮ ದೇಹಕ್ಕಾಗಿ ನೀವು ಎಷ್ಟೇ ವ್ಯಾಯಾಮ ಮಾಡಿದ್ರೂ ಸಹ ಅದರೊಟ್ಟಿಗೆ ಉತ್ತಮ ಆಹಾರ ಶೈಲಿಯೂ ಅತ್ಯಗತ್ಯ. ಅದರಲ್ಲೂ ಬೆಳಗ್ಗಿನ ಉಪಹಾರ ನಿಮ್ಮ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರಬಲ್ಲದು.
ಬೆಳಗ್ಗಿನ ಉಪಹಾರದಲ್ಲಿ ಮೊಟ್ಟೆಯನ್ನ ಉಪಯೋಗಿಸೋದ್ರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ಸಿಗಲಿದೆ. ಮೊಟ್ಟೆಯಲ್ಲಿರುವ ಪ್ರೋಟಿನ್, ಆಯೋಡಿನ್, ಇಮ್ಯುನೋ ಆಸಿಡ್, ಎಂಟಿ ಆಕ್ಸಿಡೆಂಟ್ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಅಧ್ಯಯನದ ಪ್ರಕಾರ ಬ್ರೇಕ್ಫಾಸ್ಟ್ ರೂಪದಲ್ಲಿ ದಿನಕ್ಕೊಂದು ಮೊಟ್ಟೆ ತಿನ್ನೋದ್ರಿಂದ 12 ಗ್ರಾಂ ಪ್ರೋಟಿನ್ ದೇಹಕ್ಕೆ ಲಭ್ಯವಾಗುತ್ತೆ. ಇದರ ಜೊತೆಯಲ್ಲಿ ವಿಟಮಿನ್ ಎ, ಡಿ, ಬಿ ಆಯೋಡಿನ್ ಅಂಶ ಸಿಗುತ್ತೆ. ಇದು ಮಾತ್ರವಲ್ಲದೇ ಕಣ್ಣಿನ ಸುತ್ತ ಇರೋ ಕಪ್ಪುವರ್ತುಲವೂ ಕಡಿಮೆಯಾಗುತ್ತೆ.
ವಿಟಮಿನ್ ಡಿ ಹೆಚ್ಚಾಗಿರುವ ಮೊಟ್ಟೆ ಸೇವನೆಯಿಂದ 20 ಮಿಲಿಗ್ರಾಂ ಪಾಸ್ಪೋರಸ್ ಹಾಗೂ 45 ಮಿಲಿಗ್ರಾಂ ಕ್ಯಾಲ್ಸಿಯಂ ದೇಹಕ್ಕೆ ಸಿಗಲಿದೆ. ಮೊಟ್ಟೆಯಲ್ಲಿರುವ ಆಯೋಡಿನ್ ಅಂಶ ಹಲ್ಲುಗಳು ಬಲಶಾಲಿಯಾಗಲು ನೆರವಾಗುತ್ತೆ.
ಮೊಟ್ಟೆಯಲ್ಲಿರುವ ವಿಟಮಿನ್ ಬಿ ಅಂಶ ಕೂದಲು ಹಾಗೂ ತ್ವಚೆಯ ಆರೈಕೆಗೆ ತುಂಬಾನೇ ಸಹಕಾರಿ. ಎಲ್ಲ ರೀತಿಯಿಂದಲೂ ಉಪಯೋಗವನ್ನೇ ನೀಡುವ ಮೊಟ್ಟೆಯನ್ನ ಬ್ರೆಕ್ಫಾಸ್ಟ್ನಲ್ಲಿ ತಿಂದು ನಿಮ್ಮ ಸ್ವಾಸ್ಥ್ಯವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಿ.