alex Certify ‘ಬ್ರೇಕ್​ ಫಾಸ್ಟ್’ ಜೊತೆ ಇದನ್ನ ಸೇರಿಸೋಕೆ ಮರೆಯದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬ್ರೇಕ್​ ಫಾಸ್ಟ್’ ಜೊತೆ ಇದನ್ನ ಸೇರಿಸೋಕೆ ಮರೆಯದಿರಿ

ಬೆಳಗ್ಗಿನ ಉಪಹಾರದಲ್ಲಿ ಮೊಟ್ಟೆಯನ್ನ ಉಪಯೋಗಿಸೋದ್ರಿಂದ ನಿಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ಸಿಗಲಿದೆ. ಮೊಟ್ಟೆಯಲ್ಲಿರುವ ಪ್ರೋಟಿನ್​, ಆಯೋಡಿನ್​, ಇಮ್ಯುನೋ ಆಸಿಡ್​, ಎಂಟಿ ಆಕ್ಸಿಡೆಂಟ್​ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಅಮೆರಿಕದಲ್ಲಿ ನಡೆದ ಅಧ್ಯಯನದ ಪ್ರಕಾರ ಬ್ರೇಕ್​ಫಾಸ್ಟ್ ರೂಪದಲ್ಲಿ ದಿನಕ್ಕೊಂದು ಮೊಟ್ಟೆ ತಿನ್ನೋದ್ರಿಂದ 12 ಗ್ರಾಂ ಪ್ರೋಟಿನ್​ ದೇಹಕ್ಕೆ ಲಭ್ಯವಾಗುತ್ತೆ. ಇದರ ಜೊತೆಯಲ್ಲಿ ವಿಟಮಿನ್​ ಎ, ಡಿ, ಬಿ ಆಯೋಡಿನ್​ ಅಂಶ ಸಿಗುತ್ತೆ. ಇದು ಮಾತ್ರವಲ್ಲದೇ ಕಣ್ಣಿನ ಸುತ್ತ ಇರೋ ಕಪ್ಪುವರ್ತುಲವೂ ಕಡಿಮೆಯಾಗುತ್ತೆ.

ವಿಟಮಿನ್​ ಡಿ ಹೆಚ್ಚಾಗಿರುವ ಮೊಟ್ಟೆ ಸೇವನೆಯಿಂದ 20 ಮಿಲಿಗ್ರಾಂ ಪಾಸ್ಪೋರಸ್​ ಹಾಗೂ 45 ಮಿಲಿಗ್ರಾಂ ಕ್ಯಾಲ್ಸಿಯಂ ದೇಹಕ್ಕೆ ಸಿಗಲಿದೆ. ಮೊಟ್ಟೆಯಲ್ಲಿರುವ ಆಯೋಡಿನ್​ ಅಂಶ ಹಲ್ಲುಗಳು ಬಲಶಾಲಿಯಾಗಲು ನೆರವಾಗುತ್ತೆ.

ಮೊಟ್ಟೆಯಲ್ಲಿರುವ ವಿಟಮಿನ್​ ಬಿ ಅಂಶ ಕೂದಲು ಹಾಗೂ ತ್ವಚೆಯ ಆರೈಕೆಗೆ ತುಂಬಾನೇ ಸಹಕಾರಿ. ಎಲ್ಲ ರೀತಿಯಿಂದಲೂ ಉಪಯೋಗವನ್ನೇ ನೀಡುವ ಮೊಟ್ಟೆಯನ್ನ ಬ್ರೆಕ್​ಫಾಸ್ಟ್​ನಲ್ಲಿ ತಿಂದು ನಿಮ್ಮ ಸ್ವಾಸ್ಥ್ಯವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...