ಇಡ್ಲಿ ಜತೆ ವಡಾ ಇದ್ದರೆ ತಿನ್ನಲು ಸಖತ್ ಆಗಿರುತ್ತದೆ. ಬ್ರೆಡ್ ಬಳಸಿ ಕೂಡ ಮೆದುವಾದ ವಡಾ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
6 ಪೀಸ್ ಬ್ರೆಡ್, ¼ ಕಪ್ – ರವೆ, ½ ಕಪ್ – ಅಕ್ಕಿ ಹಿಟ್ಟು, ¾ ಕಪ್ – ಮೊಸರು, 1 – ಈರುಳ್ಳಿ ಸಣ್ಣಗೆ ಹಚ್ಚಿದ್ದು, 1 ಟೀ ಸ್ಪೂನ್ – ಶುಂಠಿ ಪೇಸ್ಟ್, 1 – ಹಸಿಮೆಣಸು, ಸ್ವಲ್ಪ ಕರಿಬೇವು (ಸಣ್ಣಗೆ ಕತ್ತರಿಸಿದ್ದು), 2 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ), ½ ಟೀ ಸ್ಪೂನ್ – ಉಪ್ಪು, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಒಂದು ಅಗಲವಾದ ಬೌಲ್ ತೆಗೆದುಕೊಂಡು ಅದಕ್ಕೆ ಬ್ರೆಡ್ ಪೀಸ್ ಗಳನ್ನು ಚಿಕ್ಕ ಚಿಕ್ಕ ಪೀಸ್ ಮಾಡಿ ಹಾಕಿ ನಂತರ ರವೆ, ಅಕ್ಕಿಹಿಟ್ಟು, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ ಪೇಸ್ಟ್, ಕತ್ತರಿಸಿದ ಹಸಿಮೆಣಸು, ಕರಿಬೇವು, ಕೊತ್ತಂಬರಿಸೊಪ್ಪು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ವಡೆಯ ಮಿಶ್ರಣದಷ್ಟು ದಪ್ಪಗೆ ಇರಲಿ ಇದು. ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು ಈ ಮಿಶ್ರಣವನ್ನು ಕೈಗೆ ತುಸು ತೆಗೆದುಕೊಂಡು ಕಾದ ಎಣ್ಣೆಯಲ್ಲಿ ವಡೆಯ ಆಕಾರದಲ್ಲಿ ಬಿಟ್ಟು ಎರಡೂ ಕಡೆ ಚೆನ್ನಾಗಿ ಕರಿದು ತೆಗೆಯಿರಿ.