alex Certify ʼಬ್ರೆಡ್ʼ ಗೆ ಬೂಸ್ಟ್ ಹಿಡಿದಿದ್ದರೂ ಸೇವಿಸಬಹುದೇ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ರೆಡ್ʼ ಗೆ ಬೂಸ್ಟ್ ಹಿಡಿದಿದ್ದರೂ ಸೇವಿಸಬಹುದೇ……?

ಮನೆಗೆ ತಂದ ಬ್ರೆಡ್ ನಾಲ್ಕು ದಿನಗಳ ಬಳಿಕ ತುಸುವೇ ಬಣ್ಣ ಬದಲಾಗಿ ಬೂಸ್ಟ್ ಹಿಡಿದಂತಾಗಿದೆಯೇ. ದುಬಾರಿ ದುಡ್ಡು ಕೊಟ್ಟು ತಂದದ್ದನ್ನು ಎಸೆಯುವುದು ಏಕೆಂದು ತಿನ್ನಲು ಮುಂದಾಗುವ ಮುನ್ನ ಇಲ್ಲಿ ಕೇಳಿ.

ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಬ್ರೆಡ್, ಬೇಕರಿ ಪದಾರ್ಥಗಳಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತದೆ.

ನೀವು ಆ ಭಾಗವನ್ನು ಕತ್ತರಿಸಿ ತೆಗೆದು ಉಳಿದ ಭಾಗವನ್ನು ಸೇವಿಸಿದರೂ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಲ್ಲದು.

ಇದರ ಸೇವನೆಯಿಂದ ವಿಷಾಂಶ ಹೊಟ್ಟೆಗೂ ಸೇರುತ್ತದೆ. ಇದರಿಂದ ಹೊಟ್ಟೆನೋವು, ವಾಕರಿಕೆ ಮತ್ತಿತರ ಲಕ್ಷಣಗಳು ಕಂಡುಬರುತ್ತವೆ.

ಕೆಟ್ಟ ಬ್ಯಾಕ್ಟೀರಿಯಾಗಳ ಈ ಸಮೂಹ ಮಾನವ ಶರೀರವನ್ನು ಪ್ರವೇಶಿಸಿದರೆ ಯಕೃತ್ ಮತ್ತು ಹೃದಯಕ್ಕೆ ಹಾನಿ ಮಾಡಿ ಕೆಲವೊಮ್ಮೆ ಕ್ಯಾನ್ಸರ್ ಕಾರಕವಾಗಿಯೂ ಬದಲಾಗಬಹುದು. ಅಲರ್ಜಿ ಲಕ್ಷಣಗಳೂ ಕಂಡು ಬಂದಾವು. ಹಾಗೇನಾದರೂ ಆದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಯಾವುದೇ ಕಾರಣಕ್ಕೂ ನಿರ್ಲಕ್ಷಿಸದಿರಿ.

ಹಣ್ಣು, ತರಕಾರಿ ಚೀಸ್ ಮತ್ತು ಮಾಂಸಗಳಲ್ಲಿ ಫಂಗಸ್ ಬಂದರೆ ಅದನ್ನು ತೆಗೆದು ಸೇವಿಸಬಹುದು. ಅದರೆ ಬ್ರೆಡ್, ಸಾಸೇಜ್, ಪಾಸ್ತಾ, ಯೋಗರ್ಟ್, ಜಾಮ್ ಗಳಲ್ಲಿ ಫಂಗಸ್ ಕಂಡುಬಂದರೆ ಅದನ್ನು ಬಳಸದೆ ಎಸೆಯುವುದು ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...