ಯಾವುದಾದರೂ ಸ್ನ್ಯಾಕ್ಸ್ ಮಾಡುವುದಕ್ಕೆ ಬ್ರೆಡ್ ಕ್ರಂಬ್ಸ್ ಇದ್ದರೆ ಚೆನ್ನಾಗಿರುತ್ತದೆ. ಸ್ನ್ಯಾಕ್ಸ್ ಅನ್ನು ಬ್ರೆಂಡ್ ಕ್ರಂಬ್ಸ್ ನಲ್ಲಿ ಹೊರಳಾಡಿಸಿ ಡೀಪ್ ಫ್ರೈ ಮಾಡಿದರೆ ಅದರ ಸ್ವಾದವೇ ಬೇರೆಯಾಗಿರುತ್ತದೆ. ಮಾರುಕಟ್ಟೆಯಲ್ಲೂ ಇದು ಲಭ್ಯವಿರುತ್ತದೆ. ಹೊರಗಡೆಯಿಂದ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಸವಿಯಬಹುದು.
ನೀವು ಒವೆನ್ ಬಳಸುವುದಾದರೆ ಒವೆನ್ ನಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಇಟ್ಟು10 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ನಂತರ ಇದನ್ನು 10 ನಿಮಿಷಗಳ ಕಾಲ ಒವೆನ್ ನಲ್ಲಿಯೇ ಇಟ್ಟುಬಿಡಿ. ಬ್ರೆಡ್ ಗಟ್ಟಿಯಾಗುತ್ತದೆ. ಹೊರತೆಗೆದು ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡರೆ ಬ್ರೆಡ್ ಕ್ರಂಬ್ಸ್ ರೆಡಿ.
ಇನ್ನು ಒವೆನ್ ಇಲ್ಲದವರು ಕಾವಲಿಯನ್ನು ಬಿಸಿ ಮಾಡಿಕೊಳ್ಳಿ. ನಂತರ ಇದರ ಮೇಲೆ ಈ ಬ್ರೆಡ್ ಸ್ಲೈಸ್ ಗಳನ್ನು ಇಟ್ಟು ಎರಡೂ ಕಡೆ ಗರಿ ಗರಿಯಾಗುವಂತೆ ಕಾಯಿಸಿಕೊಳ್ಳಿ. ಬ್ರೆಡ್ ಗಟ್ಟಿಯಾಗಲಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.