ಮಾರುತಿ ಸುಜುಕಿ ಕಂಪನಿ ಬಹಳ ಹಿಂದೆಯೇ ಭಾರತದಲ್ಲಿ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿತ್ತು. ತನ್ನ ಸಂಪೂರ್ಣ ಗಮನವನ್ನು CNG ಕಡೆಗೆ ಕೇಂದ್ರೀಕರಿಸಿತ್ತು. ಈ ನಿರ್ಧಾರದಿಂದ ಕಂಪನಿಗೆ ಈಗ ಪ್ರಯೋಜನವಾಗ್ತಿದೆ. CNG ಕಾರುಗಳು ಡೀಸೆಲ್ ಕೊರತೆಯನ್ನು ನೀಗಿಸ್ತಾ ಇವೆ.
ಮಾರುತಿ ಕಂಪನಿಯ ಸಿ ಎನ್ ಜಿ ಕಾರುಗಳಿಗೆ ಬೇಡಿಕೆಯೂ ಹೆಚ್ಚಿದೆ. ಹಾಗಾಗಿ ಸದ್ಯದಲ್ಲೇ ಜನಪ್ರಿಯ ಎಸ್‌ಯುವಿ ವಿಟಾರಾ ಬ್ರೀಝಾ ಸಿಎನ್‌ಜಿ ಮಾದರಿಯನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರಸ್ತುತ ಮಾರುತಿ ಕಂಪನಿ ಭಾರತದಲ್ಲಿ ಆಲ್ಟೊ, ಸೆಲೆರಿಯೊ, ಎಸ್-ಪ್ರೆಸ್ಸೊ, ವ್ಯಾಗನಾರ್, ಎರಿಟಿಗಾ ಮತ್ತು ಇಕೊದ ಸಿಎನ್‌ಜಿ ರೂಪಾಂತರಗಳನ್ನು ಮಾರಾಟ ಮಾಡುತ್ತಿದೆ. ಇನ್ನೂ ಹಲವು ಮಾಡೆಲ್ ಗಳ ಸಿ ಎನ್ ಜಿ ರೂಪಾಂತರ ಮಾರುಕಟ್ಟೆಗೆ ಬರಬಹುದು.
ಮಾರುತಿ ಸುಜುಕಿಯು ಹೊಸ ಬ್ರೀಝಾ ಕಾರನ್ನು ಕೂಡ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. CNG ಚಾಲಿತವಾಗಿರೋ 2022 Brezza SUV ಗಾತ್ರದಲ್ಲಿ ದೊಡ್ಡದು ಜೊತೆಗೆ ಹೆಚ್ಚು ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಹೊಸ SUVಯನ್ನು ಸಾಕಷ್ಟು ಬದಲಾವಣೆಗಳೊಂದಿಗೆ ರಸ್ತೆಗಿಳಿಸಲಿದೆ.
ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಈ ಬಾರಿ ಹೊಸ ಕಾರನ್ನು ಬ್ರೀಝಾ ಹೆಸರಿನೊಂದಿಗೆ ಬಿಡುಗಡೆ ಮಾಡಬಹುದು. ಇದು ಉತ್ತಮ ಗುಣಮಟ್ಟದ ಕ್ಯಾಬಿನ್ ಹೊಂದಿದೆ. ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಎಲೆಕ್ಟ್ರಿಕ್ ಸನ್‌ರೂಫ್, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಇದರಲ್ಲಿ ಇರುತ್ತವೆ.