ಪಾಪ್ ಲೋಕದ ಜನಪ್ರಿಯ ತಾರೆ ಬ್ರಿಟ್ನಿ ಸ್ಪಿಯರ್ಸ್ ಅನಾರೋಗ್ಯದ ಬಗ್ಗೆ ಅಭಿಮಾನಿಗಳು ಕಳವಳಗೊಂಡಿದ್ದಾರೆ. ಬ್ರಿಟ್ನಿ ಸ್ಪಿಯರ್ಸ್ ದೇಹದ ಬಲಭಾಗದಲ್ಲಿ ವಿಪರೀತ ನೋವಿನಿಂದ ಬಳಲುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಿಗಾಗಿ ಕ್ಯಾಮೆರಾದ ಮುಂದೆ ಡಾನ್ಸ್ ಮಾಡುವ ಮೂಲಕ ನೋವಿನ ವಿರುದ್ಧ ಹೋರಾಡುತ್ತಿದ್ದೇನೆ ಅಂತಾ ಖುದ್ದು ಪಾಪ್ ಗಾಯಕಿ ಹೇಳಿಕೊಂಡಿದ್ದಾರೆ. ಡಾನ್ಸ್, ನೋವನ್ನು ಮರೆಯಲು, ಶಮನಗೊಳಿಸಲು ಸಹಾಯ ಮಾಡ್ತಿದೆಯಂತೆ.
ಸಖತ್ತಾಗಿರೋ ಹಾಡೊಂದಕ್ಕೆ ಭರ್ಜರಿ ಡಾನ್ಸ್ ಮಾಡಿರೋ ಬ್ರಿಟ್ನಿ ಸ್ಪಿಯರ್ಸ್, ಆ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೆಂಪನೆಯ ಟಾಪ್, ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿ ಸಖತ್ತಾಗಿ ಕುಣಿದಿದ್ದಾರೆ ಬ್ರಿಟ್ನಿ. ಡಾನ್ಸ್ ಮಾಡುತ್ತ ಮಾಡುತ್ತ ಕೆಲವೊಂದು ಸೆಕ್ಸಿ ಸ್ಟೆಪ್ಗಳನ್ನೂ ಹಾಕಿದ್ದಾರೆ. ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.
“ನಾನು ವಿಕ್ಟೋರಿಯಾ ಡ್ಯಾನ್ಸ್ ಮಾಡುತ್ತಿದ್ದೇನೆ. ನನ್ನ ದೇಹದ ಬಲಭಾಗದಲ್ಲಿ ನೋವಿದೆ. ದೇವರು ಅದನ್ನು ಗುಣಪಡಿಸುತ್ತಾನೆ ಮತ್ತು ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ”ಅಂತಾ ದುಃಖದಿಂದಲೇ ಬರೆದಿದ್ದಾರೆ. ನೋವು ಎಷ್ಟು ಅಸಹನೀಯವಾಗಿದೆ ಎಂಬುದನ್ನು ಕೂಡ ಬ್ರಿಟ್ನಿ ವಿವರಿಸಿದ್ದಾರೆ.
“ರಕ್ತನಾಳಗಳು ಚಿಕ್ಕದಾಗಿವೆ. ನನ್ನ ದೇಹದ ಬಲಭಾಗದಲ್ಲಿ ಸೂಜಿ ಚುಚ್ಚಿದಂತಹ ನೋವು. ಕುತ್ತಿಗೆಯನ್ನೂ ಅದು ಬಿಟ್ಟಿಲ್ಲ. ನನ್ನನ್ನು ಈ ನೋವು ಕುಟುಕುತ್ತಲೇ ಇದೆ. ಇದನ್ನು ಜಯಿಸಲು ನಾನು ಉತ್ತಮ ಕೆಲಸ ಮಾಡ್ತಿದ್ದೇನೆ” ಅಂತಾ ಬ್ರಿಟ್ನಿಸ್ಪಿಯರ್ಸ್ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೆಚ್ಚಿನ ಗಾಯಕಿ ಬೇಗ ಗುಣಮುಖರಾಗಲಿ ಎಂದು ಹಾರೈಸಿ ಅಭಿಮಾನಿಗಳು ಸಾಕಷ್ಟು ಕಮೆಂಟ್ ಕೂಡ ಮಾಡಿದ್ದಾರೆ.