ಬ್ರಿಟನ್ ನೂತನ ಪ್ರಧಾನಿಯಾಗಿ ಕರ್ನಾಟಕದ ಅಳಿಯ ರಿಷಿ ಸುನಾಕ್ ಈಗಾಗಲೇ ಆಯ್ಕೆಯಾಗಿದ್ದಾರೆ. ಇದನ್ನು ದೊರೆ ಮೂರನೇ ಕಿಂಗ್ ಚಾರ್ಜ್ ಅಧಿಕೃತಗೊಳಿಸಿದ ಬಳಿಕ ಅಂತಿಮಗೊಳಿಸಲಾಗುತ್ತದೆ. ಬ್ರಿಟನ್ ನೂತನ ಪ್ರಧಾನಿಯಾಗಿರುವ ರಿಷಿ ಸುನಾಕ್ ಅವರ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.
ರಿಷಿ ಸುನಾಕ್, ಭಾರತದ ಪಂಜಾಬ್ ಮೂಲದ ಯಶ್ವೀರ್ ಮತ್ತು ಉಷಾ ಸುನಾಕ್ ದಂಪತಿಯ ಪುತ್ರ. ರಿಷಿ ಬ್ರಿಟನ್ ನ ಸೌತಾಂಪ್ಟನ್ ನಲ್ಲಿ ಜನಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಕ್ಯಾನ್ ಫೋರ್ಡ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಇನ್ಫೋಸಿಸ್ ನ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಅವರನ್ನು ಭೇಟಿಯಾಗಿದ್ದ ರಿಷಿ, ಬಳಿಕ 2009ರ ಆಗಸ್ಟ್ 31 ರಂದು ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
42 ವರ್ಷದ ರಿಷಿ ಸುನಾಕ್ ಬ್ರಿಟನ್ ನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಪಟ್ಟಕ್ಕೇರಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಅಲ್ಲದೆ ರಿಷಿ ಸುನಾಕ್, ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬ್ರಿಟನ್ ಸಂಸದರಾಗಿದ್ದಾರೆ.