ಬ್ರಿಟನ್ : ಓಮಿಕ್ರಾನ್ ಆತಂಕ ಬ್ರಿಟನ್ ನಲ್ಲಿ ಮಿತಿ ಮೀರುತ್ತಿದೆ. ಅಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಈಗ ಅಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 10 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿಯೇ ಅದರ ಹಬ್ಬುವಿಕೆಯ ತೀವ್ರತೆಗೆ ಯುಕೆನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
BIG NEWS: ಶಿವಾಜಿ ಪ್ರತಿಮೆಗೆ ಮಸಿ; 7 ಜನರ ಬಂಧನ
7 ಜನ ಓಮಿಕ್ರಾನ್ ಸೋಂಕಿತರು ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ. ಸದ್ಯ ಶೇ.30ರಷ್ಟು ಓಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗದಿರುವುದರಿಂದಾಗಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಲ್ಲಿನ ಬ್ರಿಟಿಷ್ ಸರ್ಕಾರದ ತುರ್ತುಸ್ಥಿತಿಗಳ ವೈಜ್ಞಾನಿಕ ಸಲಹಾ ಗುಂಪು ತಿಳಿಸಿದೆ.
ಅಲ್ಲದೇ, ಈ ಸಲಹಾ ಗುಂಪು, ಓಮಿಕ್ರಾನ್ ಇದೇ ರೀತಿ ಹಬ್ಬಿದರೆ ಮುಂದಿನ ದಿನಗಳಲ್ಲಿ ಪ್ರತಿ ದಿನ 3 ಸಾವಿರಕ್ಕೂ ಅಧಿಕ ಜನ ಆಸ್ಪತ್ರೆಗೆ ದಾಖಲಾಗಬಹುದು ಎಂದು ಕೂಡ ಎಚ್ಚರಿಸಿದೆ.
ಜರ್ಮನಿಯ ಯುಕೆ ಹಾಗೂ ಐರ್ಲೆಂಡ್ ನ್ನು ಕೋವಿಡ್ ಅಪಾಯದ ರಾಷ್ಟ್ರ ಎಂದು ಘೋಷಿಸಿ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ.