ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಇದೀಗ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕರ್ನಾಟಕದ ಅಳಿಯ ರಿಷಿ ಸುನಕ್ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಮಾಹಿತಿ ಹುಡುಕಿದವರ ಪೈಕಿ ಅವರ ಆಸ್ತಿ ವಿಚಾರವನ್ನೂ ಕೆದಕಿದ್ದಾರೆ. ಈ ವೇಳೆ ಇಂಟರೆಸ್ಟಿಂಗ್ ವಿಚಾರ ಒಂದು ಹೊರ ಬಿದ್ದಿದೆ.
ಹೌದು, ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಬಗ್ಗೆ ಹೊಸ ವಿಚಾರ ಬಹಿರಂಗವಾಗಿದೆ. ಬ್ರಿಟನ್ ರಾಜ ಚಾರ್ಲ್ಸ್ III ಗಿಂತ ಹೆಚ್ಚು ಶ್ರೀಮಂತರಂತೆ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ. ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಆಸ್ತಿ ಮೌಲ್ಯ ಸುಮಾರು 730 ಮಿಲಿಯನ್ ಪೌಂಡ್ ಅಂದರೆ ಭಾರತೀಯ ರೂಪಾಯಿ ಮೌಲ್ಯದ ಲೆಕ್ಕ ನೋಡಿದರೆ, 68,36,20,03,400.
ಈ ಆಸ್ತಿ ಮೌಲ್ಯ, ಕಿಂಗ್ ಚಾರ್ಲ್ಸ್ ಹಾಗೂ ಪತ್ನಿ ಕ್ಯಾಮಿಲ್ಲಾ ಅವರ ಆಸ್ತಿಗಿಂತ ಬರೋಬ್ಬರಿ 2 ಪಟ್ಟು ಹೆಚ್ಚಿದೆಯಂತೆ. ಯುಕೆ ರಾಜ ಚಾರ್ಲ್ಸ್ III ಹಾಗೂ ಪತ್ನಿ ಅವರ ಸಂಪತ್ತು 300 ಮಿಲಿಯನ್‌ನಿಂದ 350 ಮಿಲಿಯನ್ ಪೌಂಡ್, ಅಂದರೆ 28,09,50,13,887 ರೂಪಾಯಿಯಂತೆ. ಬ್ರಿಟನ್ನಿನ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಸುನಕ್ ಪಾತ್ರರಾಗಿದ್ದಾರೆ.