ಬ್ರಾಹ್ಮಣ ಪುರೋಹಿತರು ಜನರನ್ನು ಮೂರ್ಖರನ್ನಾಗಿ ಮಾಡುವ ಮೂಲಕ ಅವರ ಹಣ ಹಾಗೂ ಧಾನ್ಯ ಲೂಟಿ ಮಾಡುತ್ತಾರೆ. ಯುವತಿಯರನ್ನು ನೇರವಾಗಿ ನೋಡುವ ಸಲುವಾಗಿಯೇ ಅವರನ್ನು ಕಾರ್ಯಕ್ರಮಗಳಲ್ಲಿ ಮುಂದೆ ಕೂರಿಸಿಕೊಳ್ಳುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಲಾಗಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರ ಸಂಬಂಧಿಯೂ ಆಗಿರುವ ಪ್ರೀತಮ್ ಲೋದಿ ಬಿಜೆಪಿಯಿಂದ ವಜಾಗೊಂಡವರಾಗಿದ್ದಾರೆ.
ಆಗಸ್ಟ್ 17ರಂದು ಪ್ರೀತಮ್ ಲೋದಿ ಈ ಹೇಳಿಕೆ ನೀಡಿದ್ದು, ಅವರ ಬ್ರಾಹ್ಮಣ ವಿರೋಧಿ ಹಾಗೂ ಮಹಿಳಾ ವಿರೋಧಿ ನೀತಿಗೆ ಹಲವು ಸಂಘಟನೆಗಳು ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಪ್ರೀತಮ್ ಲೋದಿಯವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ.