![](https://kannadadunia.com/wp-content/uploads/2023/04/3d009a550b1dd77b491.jpg)
ಬ್ರಾಹ್ಮಣ ಎಂಬ ಪದವು ಅಬ್ರಹಾಂ ಎಂಬ ಶಬ್ಧದಿಂದ ಬಂದಿದೆ ಎಂದು ಪೋಸ್ಟ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದ ಗಾಯಕ ಲಕ್ಕಿ ಅಲಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ.
‘ಓ ಸನಮ್’, ‘ಏಕ್ ಪಾಲ್ ಕಾ ಜೀನಾ’, ‘ಸಫರ್ನಾಮ’ ಮತ್ತು ಹಲವಾರು ಹಾಡುಗಳಿಗೆ ಹೆಸರುವಾಸಿಯಾಗಿರುವ ಗಾಯಕ ಲಕ್ಕಿ ಅಲಿ ಇತ್ತೀಚೆಗೆ ಫೇಸ್ಬುಕ್ನಲ್ಲಿ ಟಿಪ್ಪಣಿಯನ್ನು ಪೋಸ್ಟ್ ಮಾಡಿದ ನಂತರ ವಿವಾದದಲ್ಲಿ ಸಿಲುಕಿದ್ದರು.
ಬ್ರಾಹ್ಮಣ ಎಂಬ ಪದವು ಅಬ್ರಹಾಂ ಎಂಬ ಶಬ್ಧದಿಂದ ಬಂದಿದೆ ಎಂದು ಪೋಸ್ಟ್ ಮಾಡಿ ಭಾರೀ ವಿವಾದದ ಬಳಿಕ ಡಿಲೀಟ್ ಮಾಡಿದ್ದರು. ಲಕ್ಕಿ ಅಲಿ ತಮ್ಮ ವಿವಾದಿತ ಪೋಸ್ಟ್ ಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿತ್ತು.
ಇದೀಗ ಕ್ಷಮೆ ಕೇಳಿರುವ ಲಕ್ಕಿ ಅಲಿ, “ಎಲ್ಲ ಆತ್ಮೀಯರೇ, ನನ್ನ ಕೊನೆಯ ಪೋಸ್ಟ್ ವಿವಾದ ಹುಟ್ಟುಹಾಕಿದೆ ಎಂಬುದು ನನಗೆ ಅರಿವಾಗಿದೆ. ನನ್ನ ಉದ್ದೇಶ ಯಾರಿಗೂ ನೋವು, ಕೋಪವನ್ನು ಉಂಟುಮಾಡುವುದಾಗಿರಲಿಲ್ಲ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಆದರೆ ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ. ಇದು ನನ್ನ ಹಿಂದೂ ಗೆಳೆಯರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ” ಎಂದು ಅವರು ಕ್ಷಮೆ ಕೇಳಿ ಪೋಸ್ಟ್ ಮಾಡಿದ್ದಾರೆ.