ಬಿಸಿಲ ಝಳ, ಧೂಳು ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮುಖದ ಹೊಳಪು ಮರೆಯಾಗಿ ಹೋಗುತ್ತದೆ. ಮುಖವನ್ನು ಸುಂದರವಾಗಿಸಲು ನಾವು ಪಾರ್ಲರ್‌ಗೆ ಹೋಗುತ್ತೇವೆ. ಅಲ್ಲಿ ಕ್ಲೀನಪ್, ಫೇಶಿಯಲ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತೇವೆ. ಹೀಗೆ ಮಾಡುವ ಬದಲು ಮನೆಯಲ್ಲೇ ಮುಖಕ್ಕೆ ಬೇಕಾದ ಆರೈಕೆಯನ್ನು ಯಾವುದೇ ಖರ್ಚಿಲ್ಲದೆ ಮಾಡಿಕೊಳ್ಳಬಹುದು.
ಮನೆಯಲ್ಲೇ ಕ್ಲೀನಪ್‌ಗಾಗಿ ಮೊದಲು ಫೇಸ್‌ವಾಶ್ ಹಾಕಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಉಗುರು ಬೆಚ್ಚಗಿನ ನೀರು ಮುಖದಲ್ಲಿರುವ ಧೂಳು ಮತ್ತು ಕೊಳೆಯನ್ನು ಹೋಗಲಾಡಿಸುತ್ತದೆ. ಮುಖದ ಪೋರ್ಸ್ ಅನ್ನು ಓಪನ್ ಮಾಡುತ್ತದೆ. ಮುಖ ತೊಳೆದ ನಂತರ ಮೃದುವಾದ ಟವೆಲ್‌ನಿಂದ ಒರೆಸಿ. ಬಿಸಿನೀರಿನ ಆವಿಯು ಚರ್ಮದ ಕೋಶಗಳಿಗೆ ಶಾಖವನ್ನು ತಲುಪಿಸುತ್ತದೆ. ಚೆನ್ನಾಗಿ ಬೆವರು ಹರಿದು ಮುಖವು ಹೊಳೆಯುತ್ತದೆ.
ಇದಾದ ಬಳಿಕ ಐಸ್ ಕ್ಯೂಬ್ ತೆಗೆದುಕೊಂಡು ಮುಖಕ್ಕೆ ಮಸಾಜ್ ಮಾಡಿ. ಐಸ್ ಮಸಾಜ್ ತುಂಬಾನೇ ಪ್ರಯೋಜನಕಾರಿ. ಐಸ್ ಮಸಾಜ್ ನಂತರ ಸ್ಕ್ರಬ್ ಮಾಡಿ. ಸ್ಕ್ರಬ್ ಮುಖವನ್ನು ಸ್ವಚ್ಛಗೊಳಿಸುತ್ತದೆ, ಇದು ಕಪ್ಪು ಕಲೆಗಳನ್ನು ಸಹ ತೆಗೆದುಹಾಕುತ್ತದೆ. ಅಕ್ಕಿ ಹಿಟ್ಟು ಮತ್ತು ಅಲೋವೆರಾವನ್ನು ಮಿಶ್ರಣ ಮಾಡಿಕೊಂಡು ನೀವು ನೈಸರ್ಗಿಕ ಸ್ಕ್ರಬ್ ಅನ್ನು ತಯಾರಿಸಬಹುದು. ಸ್ಕ್ರಬ್ ಮಾಡಿದ ನಂತರ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿ.
ಇದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ಮನೆಯಲ್ಲೇ ಯಾವುದಾದರೂ ಹಣ್ಣಿನ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಫೇಸ್ ಪ್ಯಾಕ್ ಅನ್ನು ಅರ್ಧಗಂಟೆ ನಂತರ ತೊಳೆದುಕೊಳ್ಳಿ. ಕೊನೆಯದಾಗಿ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಈ ರೀತಿ ಮನೆಯಲ್ಲೇ ಮುಖದ ಸೌಂದರ್ಯವನ್ನು ಸುಲಭವಾಗಿ ದುಪ್ಪಟ್ಟು ಮಾಡಿಕೊಳ್ಳಬಹುದು.