ಅಮೆರಿಕದಲ್ಲಿ ನಡೆದ ನೈಜ ಘಟನೆ ಇದು. ಥಿಯೇಟರ್ ಒಂದ್ರಲ್ಲಿ ಬ್ಯಾಟ್ ಮ್ಯಾನ್ ಸಿನೆಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ರಿಯಲ್ ಬ್ಯಾಟ್ ಅಂದ್ರೆ ಬಾವಲಿ ಸಿನೆಮಾ ಹಾಲ್ ಗೆ ಎಂಟ್ರಿ ಕೊಟ್ಟಿದೆ.
ಸಿನೆಮಾ ಹಾಲ್ ತುಂಬೆಲ್ಲಾ ಬಾವಲಿ ಪಟಪಟನೆ ಹಾರಲಾರಂಭಿಸಿದೆ. ಇದರಿಂದಾಗಿ ಪ್ರೇಕ್ಷಕರಿಗೂ ಡಿಸ್ಟರ್ಬ್ ಆಗಿದ್ದರಿಂದ ಕೂಡಲೇ ಸಿನೆಮಾ ಪ್ರದರ್ಶನವನ್ನು ಸ್ವಲ್ಪಹೊತ್ತು ಸ್ಥಗಿತಗೊಳಿಸಲಾಯ್ತು.
ಈ ವೇಳೆ ಥಿಯೇಟರ್ ನಲ್ಲೇ ಇದ್ದ ಪ್ರೇಕ್ಷಕನೊಬ್ಬ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈತನ ಟ್ವೀಟ್ ಗೆ ಸಾಕಷ್ಟು ಫನ್ನಿ ಕಮೆಂಟ್ ಗಳು ಬಂದಿವೆ.
ಇನ್ನು ರಾಬರ್ಟ್ ಪ್ಯಾಟಿಸನ್ ಹಾಗೂ ಜೋ ಕ್ರಾವಿಟ್ಜ್ ಅಭಿನಯದ ಬ್ಯಾಟ್ ಮ್ಯಾನ್ ಚಿತ್ರ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ದಿ ಡಾರ್ಕ್ ನೈಟ್ ಗೆ ಈ ಚಿತ್ರವನ್ನು ಹೋಲಿಕೆ ಮಾಡಲಾಗ್ತಿದೆ.
ಮಾರ್ಚ್ 4ರಂದು ರಿಲೀಸ್ ಆಗಿರುವ ಬ್ಯಾಟ್ ಮ್ಯಾನ್ ಚಿತ್ರ ಈಗಾಗ್ಲೇ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ 250 ಮಿಲಿಯನ್ ಡಾಲರ್ ಹಣ ಬಾಚಿಕೊಂಡಿದೆ. ಭಾರತದಲ್ಲೂ ಈ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ವಾರದಲ್ಲೇ 8 ಕೋಟಿ ಗಳಿಕೆ ಮಾಡಿದೆ.
https://twitter.com/Jeremiah24_/status/1499925051482820610?ref_src=twsrc%5Etfw%7Ctwcamp%5Etweetembed%7Ctwterm%5E1499955080136564736%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fa-real-bat-entered-the-screening-of-the-batman-and-internet-flew-with-memes-4845188.html