ಬ್ಯಾಟ್ಮಿಂಟನ್ ತಾರೆ ಪಿ.ವಿ. ಸಿಂಧು ಬಿಡಬ್ಲ್ಯೂಎಫ್ ಅಥ್ಲೀಟ್ ಕಮೀಷನ್ ನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್, ಸಿಂಧು ಸೇರಿದಂತೆ 6 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿದೆ. ಈ ಸದಸ್ಯರ ಅಧಿಕಾರವಧಿ 2025 ರ ವರೆಗೆ ಇರಲಿದ್ದು, ಆಯ್ಕೆಯಾಗಿರುವ ಸದಸ್ಯರಲ್ಲಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸದ್ಯದಲ್ಲಿಯೇ ಕಮೀಷನ್ ನೇಮಕ ಮಾಡಲಿದೆ.
ಸತ್ತ ಮೀನನ್ನು ಪ್ಯಾನ್‍ನಲ್ಲಿ ಹಾಕಿದಾಗ ಆಗಿದ್ದೇ ಬೇರೆ..! ವೈರಲ್ ವಿಡಿಯೋ ಕಂಡು ಬೆಚ್ಚಿಬಿದ್ದ ನೆಟ್ಟಿಗರು
ಈ ಆಯೋಗದಲ್ಲಿ ಭಾರತದ ಪಿ.ವಿ. ಸಿಂಧು, ಚೀನಾದ ಜೆಂಗ್ ಸಿ ವೇ, ಕೊರಿಯಾದ ಕಿಮ್ ಸೊಯೊಂಗ್, ನೆದರ್ಲೆಂಡ್ಸ್ ನ ರಾಬಿನ್ ಟೇಬಿಲಿಂಗ್, ಇಂಡೋನೇಷ್ಯಾದ ಗ್ರೇಸಿಯಾ ಪೋಲಿ, ಅಮೆರಿಕದ ಐರಿಸ್ ವಾಂಗ್ ಸದಸ್ಯರಾಗಿದ್ದಾರೆ.
2 ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಸಾಧನೆ ಮಾಡಿರುವ ಪಿ.ವಿ. ಸಿಂಧು ಬಿಡಬ್ಲ್ಯೂಎಫ್ ನ ಸದಸ್ಯರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಈ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.