ಸಾಲಗಾರರ ಕಾಟ ತಾಳಲಾರದೆ ಇದಕ್ಕೆ ಸಲ್ಯೂಷನ್ ಹುಡುಕ್ತಿದ್ದ ಧೀರಜ್ ಗೆ, ನ್ಯೂಸ್ ಪೇಪರ್ ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ಸಿಕ್ಕಿದೆ. ಇದನ್ನ ನೋಡಿ ತಾನು ಬ್ಯಾಂಕ್ ದರೋಡೆ ಮಾಡಲು ಪ್ಲಾನ್ ಮಾಡಿದ್ದಾನೆ. ಒಬ್ಬನೇ ಬ್ಯಾಂಕ್ ದರೋಡೆ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದ್ದಾನೆ.
ಇಡೀ ಬೆಂಗಳೂರಲ್ಲಿ ಸೆಕ್ಯೂರಿಟಿ ಇಲ್ಲದ ಬ್ಯಾಂಕ್ ಗಳನ್ನ ಸರ್ಚ್ ಮಾಡಿದ್ದಾನೆ. ಬಳಿಕ ಬಿಟಿಎಂ ಲೇಔಟ್ ನಲ್ಲಿ ಸೆಕ್ಯೂರಿಟಿ ಇಲ್ಲದ್ದನ್ನ ಗಮನಿಸಿ ಮೂರು ದಿನಗಳ ಕಾಲ ಹೊಂಚು ಹಾಕಿ, ಜನವರಿ 14ನೇ ತಾರೀಖಿನಂದು ದರೋಡೆ ಮಾಡಿದ್ದಾನೆ. ಇಡೀ ದಿನ ಬ್ಯಾಂಕ್ ಬಿಲ್ಡಿಂಗ್ ಮೇಲೆಯೇ ಇದ್ದು, ಬ್ಯಾಂಕ್ ನಲ್ಲಿ ಇಬ್ಬರು ಸಿಬ್ಬಂದಿಗಳಿದ್ದ ಸಂದರ್ಭದಲ್ಲಿ ಚಾಕು ಹಿಡಿದು ಒಳಗೆ ನುಗ್ಗಿದ್ದಾನೆ. ಬ್ಯಾಂಕ್ ನಲ್ಲಿದ್ದ ಮ್ಯಾನೇಜರ್ ಹಾಗೂ ಮಹಿಳಾ ಸಿಬ್ಬಂದಿಯನ್ನ ಬೆದರಿಸಿ ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ಪೊಲೀಸರ ದಾರಿ ತಪ್ಪಿಸಲು ಬ್ಯಾಂಕ್ ಸಮೀಪವೇ ಸುತ್ತಾಡಿ, ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದಾನೆ.
ದರೋಡೆ ಬಳಿಕ ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಅನಂತಪುರಂ ಸುತ್ತಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಬಂದ ಧೀರಜ್, ಸಾಲಗಾರರೆಲ್ಲರಿಗೂ ಹಣ ಹಿಂತಿರುಗಿಸಿದ್ದಾನೆ. ಇದೇ ವೇಳೆ ಮತ್ತೊಬ್ಬರಿಗೆ ಸಾಲ ಕೊಡಲು ಬಂದಾಗ ಈತನನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.