ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಹಾಗಾಗಿ ನಿಮಗೇನಾದರೂ ಬ್ಯಾಂಕ್ ಕೆಲಸಗಳಿದ್ದರೆ ಕರೆಕ್ಟಾಗಿ ಪ್ಲಾನ್ ಮಾಡಿಕೊಳ್ಳಿ. ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳಿರುವುದರಿಂದ ಬ್ಯಾಂಕಿನ ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. ದೀಪಾವಳಿ ಹಿನ್ನೆಲೆಯಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ.
ನಾಳೆಯಿಂದ ಅಂದರೆ ಅಕ್ಟೋಬರ್ 22ರಿಂದ 6 ದಿನ ಬ್ಯಾಂಕ್ ವಹಿವಾಟು ಇರುವುದಿಲ್ಲ. ಹಾಗಾಗಿ ಯಾವ್ಯಾವ ದಿನ ಯಾವ್ಯಾವ ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜಾ ಇದೆ ಅನ್ನೋದನ್ನು ನೋಡೋಣ. ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ವರ್ಷದ ಆರಂಭದಲ್ಲೇ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಅಕ್ಟೋಬರ್ 22ರಂದು ತಿಂಗಳ ನಾಲ್ಕನೇ ಶನಿವಾರವಾಗಿದ್ದು, ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ. ಅಕ್ಟೋಬರ್ 23 ಭಾನುವಾರವಾದ್ದರಿಂದ ಬ್ಯಾಂಕ್‌ಗಳಿಗೆ ವಾರದ ರಜೆ ಇರುತ್ತದೆ. ಈ ದಿನ ಕೂಡ ವಹಿವಾಟು ಇರುವುದಿಲ್ಲ. ಅಕ್ಟೋಬರ್ 24 ರಂದು ದೀಪಾವಳಿಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜಾ ಇದೆ. ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್ ಹೊರತುಪಡಿಸಿ ಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ.
ಅಕ್ಟೋಬರ್ 25ರಂದು ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್, ಜೈಪುರದಲ್ಲಿ ಲಕ್ಷ್ಮೀ ಪೂಜೆ/ದೀಪಾವಳಿ/ಗೋವರ್ಧನ ಪೂಜೆಯ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಅಕ್ಟೋಬರ್ 26ರಂದು ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜಮ್ಮು, ಕಾನ್ಪುರ್, ಲಕ್ನೋ, ಮುಂಬೈ, ನಾಗ್ಪುರದಲ್ಲಿ ಹಬ್ಬದ ನಿಮಿತ್ತ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ. ಶಿಮ್ಲಾ ಮತ್ತು ಶ್ರೀನಗರದಲ್ಲಿ ಕೂಡ ಬ್ಯಾಂಕ್‌ಗಳಿಗೆ ರಜಾ ದಿನ.
ಅಕ್ಟೋಬರ್ 27ರಂದು ಭಾಯಿ ದೂಜ್, ಚಿತ್ರಗುಪ್ತ ಜಯಂತಿ, ಲಕ್ಷ್ಮಿ ಪೂಜೆ, ದೀಪಾವಳಿ ಮತ್ತು ನಿಂಗೋಲ್ ಚಕ್ಕುಬಾ ಹಬ್ಬವನ್ನು ಆಚರಿಸಲಾಗುತ್ತದೆ. ಇದರಿಂದಾಗಿ ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ, ಲಕ್ನೋದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.