ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ ಸೈಬರ್ ವಂಚಕ ಲಿಂಕ್ ಒಂದನ್ನು ಎಸ್ಎಂಎಸ್ ಮಾಡುವ ಮೂಲಕ ಬರೋಬ್ಬರಿ 4.20 ಲಕ್ಷ ರೂಪಾಯಿ ವಂಚಿಸಿದ್ದಾನೆ. ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ನಂಬಿಸಿ ಇದಕ್ಕಾಗಿ ಬ್ಯಾಂಕಿಂಗ್ ವಿವರ ನೀಡಬೇಕೆಂದು ಹೇಳುವ ಮೂಲಕ ಹಣ ವಂಚನೆ ಮಾಡಿದ್ದಾನೆ.
ಈ ಪ್ರಕರಣ ಸಂಬಂಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಜನವರಿ 7ರಂದು ಪ್ರಕರಣ ದಾಖಲಾಗಿದೆ. 49 ವರ್ಷದ ದೂರುದಾರ ಉದ್ಯಮಿಯು ತಾನು ಐಸ್ ಕ್ರೀಮ್ ಹಾಗೂ ಡೈರಿ ಪ್ರಾಡಕ್ಟ್ಗಳ ಉದ್ಯಮ ಹೊಂದಿದ್ದೇನೆ ಎಂದು ಹೇಳಿದ್ದಾರೆ. ಜನವರಿ 5ರ ರಾತ್ರಿ 10:30ರ ಸುಮಾರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದಾನೆ. ಹಾಗೂ ನಿಮಗೆ ಅಂತಾರಾಷ್ಟ್ರೀಯ ಕ್ರೆಡಿಟ್ ನೀಡುತ್ತೇನೆ ಎಂದು ನಂಬಿಸಿದ್ದ ಅಂತಾ ಹೇಳಿದ್ರು.
ಲಿಂಕ್ ಒಂದನ್ನು ಹೊಂದಿದ್ದ ಎಸ್ಎಂಎಸ್ ಕಳುಹಿಸಿದ ಸೈಬರ್ ವಂಚಕ ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತುಂಬಿ ಎಂದು ಹೇಳಿದ್ದಾನೆ. ದೂರದಾರ ಉದ್ಯಮಿಯು ತಮ್ಮ ಸಂಪೂರ್ಣ ಬ್ಯಾಂಕಿಂಗ್ ವ್ಯವಹಾರಗಳನ್ನು ನೀಡಿದ್ದಾರೆ. ರಾತ್ರಿ 11:15ರ ಸುಮಾರಿಗೆ ಉದ್ಯಮಿಯ ಖಾತೆಯಿಂದ 4.20 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ ಎಂದು ಮೆಸೇಜ್ ಬಂದಿದೆ. ಕೂಡಲೇ ತಮ್ಮ ಖಾತೆಯನ್ನು ಲಾಕ್ ಮಾಡುವಂತೆ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ ಉದ್ಯಮಿಯು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.