
ಬೋರ್ಡ್ ಪರೀಕ್ಷೆ ಹತ್ತಿರವಾಗ್ತಿದ್ದಂತೆ ಮಕ್ಕಳು ಓದಿನ ವೇಗ ಹೆಚ್ಚಿಸುತ್ತಾರೆ. ಎಷ್ಟೇ ಓದಿದ್ರೂ ಪರೀಕ್ಷೆ ಭಯ ಮಕ್ಕಳನ್ನು ಕಾಡುತ್ತದೆ. ಕೆಲ ಮಕ್ಕಳು ಅತೀ ಒತ್ತಡಕ್ಕೆ ಒಳಗಾಗ್ತಾರೆ. ಇದ್ರಿಂದ ಬಂದ ಉತ್ತರ ಕೂಡ ಮರೆತು ಹೋಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರೀಕ್ಷೆ ವೇಳೆ ಮಕ್ಕಳು ಒತ್ತಡಕ್ಕೊಳಗಾಗಲು ರಾಹು, ಕರ್ಕ, ಶನಿ ಹಾಗೂ ಧನು ರಾಶಿಯಲ್ಲಾಗುವ ಏರುಪೇರು ಕಾರಣವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪರೀಕ್ಷೆ ವೇಳೆ ಒತ್ತಡಕ್ಕೊಳಗಾಗುವ ಮಕ್ಕಳು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.
ಶನಿವಾರ ಶನಿ ಹಾಗೂ ರಾಹುವಿನ ಆರಾಧನೆ ಮಾಡಬೇಕು.
ಅಧ್ಯಯನದ ಮೇಲೆ ಗಮನ ಹೆಚ್ಚಾಗಬೇಕೆಂದಾದ್ರೆ ಆಗಾಗ ನೀರನ್ನು ಕುಡಿಯುತ್ತಿರಿ. ಇದು ಚಂದ್ರನನ್ನು ಬಲಪಡಿಸುತ್ತದೆ.
ಓದುವ ಸ್ಥಳವನ್ನು ಸ್ವಚ್ಛವಾಗಿಡಿ. ಪುಸ್ತಕಗಳನ್ನು ಅಲ್ಲಿ-ಇಲ್ಲಿ ಎಸೆಯಬೇಡಿ. ಇದ್ರಿಂದ ಸಕಾರಾತ್ಮಕ ಶಕ್ತಿಯ ನಾಶವಾಗುತ್ತದೆ. ಏಕಾಗ್ರತೆ ಕಡಿಮೆಯಾಗುತ್ತದೆ.
ಸ್ಟಡಿ ಟೇಬಲ್ ಮೇಲೆ ನವಿಲು ಗರಿಯನ್ನಿಡಿ. ಇದು ಓದಿನ ಮೇಲೆ ಗಮನ ಹೆಚ್ಚಾಗುವಂತೆ ಮಾಡುತ್ತದೆ. ದುರ್ಬಲವೆನಿಸುವ ವಿಷಯದ ಪುಸ್ತಕದೊಳಗೆ ಗುರುವಾರ ನವಿಲು ಗರಿಯಿಡಿ.
ತಡ ರಾತ್ರಿಯವರೆಗೆ ಓದುವುದಕ್ಕಿಂತ ಬ್ರಹ್ಮ ಮುಹೂರ್ತದಲ್ಲಿ ಎದ್ದು ಅಭ್ಯಾಸ ಮಾಡಿ. ಇದು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಓದಿದ್ದು ನೆನಪಿನಲ್ಲಿರುತ್ತದೆ.