ಬೊಜ್ಜು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸೌಂದರ್ಯ ಹಾಳು ಮಾಡುತ್ತದೆ. ದಿನನಿತ್ಯದ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ.
ಸೋಮಾರಿತನ ಹೆಚ್ಚಾಗುವಂತೆ ಮಾಡುತ್ತದೆ. ಕೆಲಸಗಳು ನಿಧಾನವಾಗುತ್ತವೆ. ಎಲ್ಲರನ್ನು ಕಾಡುವ ಬೊಜ್ಜಿನ ನಿಯಂತ್ರಣಕ್ಕೆ ಈ ಯೋಗಾಸನಗಳು ಬೆಸ್ಟ್. ಇದು ಬೊಜ್ಜು ಕರಗಿಸಲು ನೆರವಾಗುತ್ತದೆ.
ಪಾದಹಸ್ತಾಸನ :
ಪಾದಹಸ್ತಾಸನಕ್ಕಾಗಿ ನೀವು ನೇರವಾಗಿ ನಿಲ್ಲಬೇಕು. ನಂತ್ರ ಬಾಗಿ ನಿಮ್ಮ ಬೆರಳುಗಳಿಂದ ನಿಮ್ಮ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿ. ಕೆಲವು ಸೆಕೆಂಡುಗಳ ಕಾಲ ಈ ರೀತಿ ಇರಿ. ಕೆಳಕ್ಕೆ ಬಾಗಿದಾಗ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಇದು ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಪಾಲಭಾತಿ ಪ್ರಾಣಾಯಾಮ :
ಕಪಾಲಭಾತಿ ಪ್ರಾಣಾಯಾಮ ಮಾಡಲು ಸಿದ್ಧಾಸನ, ಪದ್ಮಾಸನ ಅಥವಾ ವಜ್ರಾಸನದಲ್ಲಿ ಕುಳಿತು ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ. ನಿಮ್ಮ ಅಂಗೈಗಳ ಸಹಾಯದಿಂದ ಮೊಣಕಾಲುಗಳನ್ನು ಹಿಡಿದುಕೊಳ್ಳಿ ಮತ್ತು ದೇಹವನ್ನು ತುಂಬಾ ನೇರವಾಗಿ ಇರಿಸಿ. ಪೂರ್ಣ ಸಾಮರ್ಥ್ಯವನ್ನು ಬಳಸಿ, ಸಾಮಾನ್ಯಕ್ಕಿಂತ ಸ್ವಲ್ಪ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಎದೆಯನ್ನು ಉಬ್ಬಿಸಿ. ಇದರ ನಂತರ, ಹೊಟ್ಟೆಯನ್ನು ಒಳಕ್ಕೆ ಎಳೆಯಿರಿ ಉಸಿರಾಟವನ್ನು ಎಳೆತದಿಂದ ಬಿಡಿ. ಪ್ರತಿದಿನ 15-20 ನಿಮಿಷಗಳ ಕಾಲ ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ವೇಗವಾಗಿ ಮಾಯವಾಗುತ್ತದೆ.
ಪ್ರತಿ ದಿನ ನಿಯಮಿತವಾಗಿ ಯೋಗ ಮಾಡಿದ್ರೆ ಕೆಲವೇ ದಿನಗಳಲ್ಲಿ ಅದ್ರ ಪರಿಣಾಮವನ್ನು ನೀವು ಕಾಣಬಹುದಾಗಿದೆ.