ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ.
ಸೋಂಪು ನಮ್ಮ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಸೋಂಪಿನಿಂದ ಮಾಡಿದ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ತಲೆಸುತ್ತುವುದು ಮತ್ತು ಅತಿಯಾದ ತಲೆನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವ ಜನರು ಗ್ರೀನ್ ಟೀ ಕುಡಿಯುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಗ್ರೀನ್ ಟೀ ಜೊತೆ ಸೋಂಪನ್ನು ಹಾಕಿ ಕುಡಿಯುವುದರಿಂದ ಡಬಲ್ ಪ್ರಯೋಜನವನ್ನು ಪಡೆಯಬಹುದು. ಸೋಂಪಿನ ಚಹಾ ಆಮ್ಲೀಯತೆ, ಅಜೀರ್ಣ ಮತ್ತು ಆ್ಯಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.