ತೂಕ ಜಾಸ್ತಿಯಾಗಿದೆ ಅಂತಾ ಚಿಂತೆ ಮಾಡುವ ಬದಲು ತೂಕ ಕಡಿಮೆ ಮಾಡುವ ಸುಲಭ ಉಪಾಯಗಳ ಬಗ್ಗೆ ಮೊದಲು ತಿಳಿದುಕೊಳ್ಳಿ. ನಂತ್ರ ನಿಮ್ಮನ್ನು ನೀವು ಬದಲಾಯಿಸಿಕೊಂಡು, ತೂಕ ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಂಡು ಸುಂದರವಾಗಿ ಕಾಣಲು ಇಚ್ಛಿಸುತ್ತೀರಾದರೆ ಮೊದಲು ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ. ಯಾವುದರಿಂದ ನಿಮ್ಮ ತೂಕ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಆದಷ್ಟು ಆ ಆಹಾರ ಸೇವನೆಯನ್ನು ಕೈ ಬಿಡಿ.
ಲಿಂಬೆ ನೀರಿನಿಂದ ನಿಮ್ಮ ದಿನ ಶುರುವಾಗಲಿ: ಹೆಚ್ಚುವರಿಯಾಗಿ ಬಂದಿರುವ ನಿಮ್ಮ ಹೊಟ್ಟೆಯ ಚರ್ಮವನ್ನು ಕರಗಿಸಲು ಇದು ಒಳ್ಳೆಯ ಔಷಧಿ. ಬೆಚ್ಚಗಿನ ನೀರಿಗೆ ಲಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಹಾಕಿ ಬೆಳಿಗ್ಗೆ ಕುಡಿಯುತ್ತ ಬನ್ನಿ. ಇದರಿಂದ ನಿಮ್ಮ ಚಯಾಪಚಯ ಸರಿಯಾಗಿ, ನಿಮ್ಮ ತೂಕ ಕಡಿಮೆಯಾಗುತ್ತದೆ.
ಬಿಳಿ ಅಕ್ಕಿಯಿಂದ ದೂರವಿರಿ: ಅನ್ನ ನಿಮಗೆ ಬೇಕೇಬೇಕು ಎಂದಿದ್ದರೆ, ಬಿಳಿ ಅಕ್ಕಿ ಬದಲು ಬ್ರೌನ್ ರೈಸ್ ಬಳಸಿ. ಜೊತೆಗೆ ಬ್ರೌನ್ ಬ್ರೆಡ್, ಓಟ್ಸ್ ಸೇವನೆಯನ್ನು ಜಾಸ್ತಿ ಮಾಡಿ.
ಸಿಹಿಯಿಂದ ದೂರವಿರಿ: ತೂಕ ಇಳಿಸುವ ನಿರ್ಧಾರಕ್ಕೆ ನೀವು ಬಂದಿದ್ದರೆ ಸಿಹಿ ತಿಂಡಿಯಿಂದ ದೂರವಿರಿ. ಸಿಹಿ ತಿಂಡಿ, ಪಾನೀಯಗಳನ್ನು ಸೇವಿಸಬೇಡಿ. ಹಾಗೆಯೇ ಎಣ್ಣೆಯುಕ್ತ ಆಹಾರದಿಂದಲೂ ದೂರವಿರಿ. ಈ ಆಹಾರಗಳು ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶವನ್ನು ಜಾಸ್ತಿ ಮಾಡುತ್ತವೆ.
ಸಾಕಷ್ಟು ನೀರು ಕುಡಿಯಬೇಕು: ಹೊಟ್ಟೆಯ ಕೊಬ್ಬನ್ನು ಕರಗಿಸುವುದಾದರೆ ಸಾಕಷ್ಟು ನೀರನ್ನು ಕುಡಿಯುತ್ತಿರಬೇಕು. ಇದು ಚಯಾಪಚಯವನ್ನು ಸುಲಭಗೊಳಿಸುತ್ತದೆ. ಜೊತೆಗೆ ವಿಷ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ.
ಹಸಿ ಬೆಳ್ಳುಳ್ಳಿಯ ಸೇವನೆ ಮಾಡಬೇಕು: ಬೆಳಿಗ್ಗೆ ಎದ್ದ ತಕ್ಷಣ ಎರಡು ಹಸಿ ಬೆಳ್ಳುಳ್ಳಿಯನ್ನು ಜಗಿದು ನುಂಗಬೇಕು. ನಂತ್ರ ಲಿಂಬೆ ನೀರನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ತೂಕ ಬೇಗ ಕಡಿಮೆಯಾಗುತ್ತದೆ. ಜೊತೆಗೆ ರಕ್ತ ಸಂಚಾರ ಸುಲಭವಾಗುತ್ತದೆ.
ತೂಕ ಕಡಿಮೆ ಮಾಡಲು ಬಯಸುವವರು ಮಾಂಸ ಆಹಾರದಿಂದ ದೂರವಿರಬೇಕು: ಮಾಂಸ ಆಹಾರ ಕೊಬ್ಬಿನಾಂಶವನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಲು ಬಯಸುವವರು ಸಸ್ಯಾಹಾರವನ್ನು ಮಾತ್ರ ಸೇವನೆ ಮಾಡಬೇಕು.
ಆಹಾರದ ಜೊತೆ ತರಕಾರಿ ಸೇವನೆಯನ್ನು ರೂಢಿ ಮಾಡಿಕೊಳ್ಳಿ: ಬೆಳಿಗ್ಗೆ ಹಾಗೂ ರಾತ್ರಿ ಆಹಾರದ ಬದಲು ಹಣ್ಣು, ತರಕಾರಿ ಸೇವನೆ ಮಾಡಿ. ಇದರಿಂದ ನಿಮ್ಮ ಹೊಟ್ಟೆ ತುಂಬುವುದಲ್ಲದೆ, ಖನಿಜ, ಜೀವಸತ್ವಗಳು ಸಾಕಷ್ಟು ಸಿಗುತ್ತವೆ.
ಅಡುಗೆ ಮಾಡುವ ವಿಧಾನವನ್ನು ಬದಲಾಯಿಸಿಕೊಳ್ಳಿ: ನಿಮ್ಮ ಅಡುಗೆಯಲ್ಲಿ ಈ ಪದಾರ್ಥವನ್ನು ಹೆಚ್ಚಾಗಿ ಬಳಸಿ. ದಾಲ್ಚಿನಿ, ಶುಂಠಿ, ಕಾಳು ಮೆಣಸನ್ನು ಉಪಯೋಗಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.
ಹೊಟ್ಟೆ ಕರಗಿಸಲು ಬಾದಾಮಿಯನ್ನು ತಿನ್ನಿ: ಬಾದಾಮಿಯಲ್ಲಿ ವಿಟಮಿನ್ ಇ, ಫೈಬರ್ ಮತ್ತು ಪ್ರೊಟೀನ್ ಅಂಶಗಳು ಜಾಸ್ತಿ ಇರುತ್ತವೆ. ಇದರಿಂದ ವ್ಯಕ್ತಿಯ ಹೊಟ್ಟೆ ತುಂಬುತ್ತದೆ. ಆದ್ರೆ ಬೊಜ್ಜು ಬರುವುದಿಲ್ಲ.