ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಕೆಲ ವಿಡಿಯೋಗಳನ್ನ ನೋಡಿ ನಾವು ಹೊಟ್ಟೆ ಹುಣ್ಣಾಗುವಂತೆ ನಕ್ಕರೆ, ಇನ್ನೂ ಕೆಲವು ವಿಡಿಯೋಗಳನ್ನ ನೋಡಿ ಶಾಕ್ ಆಗಿರ್ತೆವೆ. ಅಂತಹದ್ದೇ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದೆ.
ಬೈಕ್ ಒಂದರಲ್ಲಿ ಜೋಡಿಯೊಂದು ಹೋಗುತ್ತಿರುವುದನ್ನ ನೀವು ಇಲ್ಲಿ ನೋಡಬಹುದು. ಇಲ್ಲಿ ಯುವಕ ಬೈಕ್ ಓಡಿಸುತ್ತಿದ್ದರೆ, ಆತನ ಹಿಂದೆ ಕುಳಿತಿರುವ ಯುವತಿ ಮೊಬೈಲ್‌ನಲ್ಲಿ ಅವರಿಬ್ಬರ ವಿಡಿಯೋ ರೆಕಾರ್ಡ್ ಮಾಡ್ತಿರ್ತಾಳೆ. ಈ ವಿಡಿಯೋ ನೋಡಿದ್ರೆ ನಿಮಗೆ ಸಿನೆಮಾ ದೃಶ್ಯ ಮೊದಲು ನೆನಪಾಗುತ್ತೆ.
ಈ ವಿಡಿಯೋ ಆರಂಭವಾಗಿ ಕೆಲವೇ ನಿಮಿಷಗಳಾಗಿದ್ದಾಗಲೇ ಬೈಕ್ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದು ಬಿಡುತ್ತೆ. ಇಬ್ಬರೂ ಮುಗ್ಗರಿಸಿಕೊಂಡು ಬಿದ್ದು ಬಿಡುತ್ತಾರೆ. ವಿಚಿತ್ರ ಏನಂದ್ರೆ ಬಿದ್ದ ಮೇಲೂ ಆಕೆ ವಿಡಿಯೋ ರೆಕಾರ್ಡ್ ಮಾಡ್ತಾನೇ ಇರ್ತಾಳೆ. ಅಷ್ಟೆ ಅಲ್ಲ ಬೈಕ್ ನಿಂದ ಬಿದ್ದ ತನ್ನ ಗೆಳೆಯನಿಗೆ ಏನಾಯೋ ಏನೋ ಅಂತ ಕೂಡಾ ವಿಚಾರ ಮಾಡದೇ, ಉಲ್ಟಾ ಆತನಿಗೆ ಬೈಯುತ್ತಾ ಈ ವಿಡಿಯೋ ರೆಕಾರ್ಡಿಂಗ್ ಮುಂದುವರೆಸಿರುತ್ತಾಳೆ. ಈ ವಿಡಿಯೋ ನೋಡಿದವರೆಲ್ಲ ಆಕೆಯನ್ನ ಬೈಯ್ದಿದ್ದಾರೆ.
ಈಗಾಗಲೇ ಈ ವಿಡಿಯೋ 1.66 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇನ್ನೂ 13.5 ಸಾವಿರ ಜನ ಲೈಕ್ ಕೊಟ್ಟಿದ್ದಾರೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಈಕೆಯ ಬಗ್ಗೆ ಥರೇವಾರಿ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
“ನಾನು ಆತನನ್ನ ನಂಬಿ ಬೈಕ್ ರೈಡ್‌ಗೆ ಬಂದಿದ್ದೆ. ಆದರೆ ಆತನಿಗೆ ಬೈಕ್ ರೈಡ್ ಮಾಡಲು ಕೂಡ ಬರೋಲ್ಲ ಎಂದು ಆಕೆ ಹೇಳಿದ್ದಾಳೋ ಏನೋ’ ಅಂತ ಕಾಮೆಂಟ್ ಬಾಕ್ಸ್‌ನಲ್ಲಿ ಒಬ್ಬರು ಕಾಮೆಂಟ್ ಬರೆದಿದ್ದಾರೆ.
ಇನ್ನೊಬ್ಬರು ‘ನನ್ನ ಹೆಂಡತಿಗೂ ಕೂಡಾ ವಿಡಿಯೋ ಮಾಡುವ ಅಭ್ಯಾಸ ಇದೆ. ಆಕೆಯೂ ಕೂಡಾ ಆಗಾಗ ಇಂತಹ ಕೆಲಸ ಮಾಡ್ತಿರ್ತಾಳೆ.’ ಎಂದು ಬರೆದಿದ್ದಾರೆ. ಇದೇ ರೀತಿ ಅನೇಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.