ಬೈಕ್ ಖರೀದಿಸಲು ಬಂದ ಯುವಕನೊಬ್ಬ ನೀಡಿದ ಹಣ ಕಂಡು ಶೋ ರೂಮ್ ಸಿಬ್ಬಂದಿ ದಂಗಾಗಿದ್ದಾರೆ. ಅಷ್ಟಕ್ಕೂ ಆತ ಖೋಟಾ ನೋಟುಗಳನ್ನೇನು ನೀಡಿರಲಿಲ್ಲ. ಕನಸಿನ ಬೈಕ್ ಖರೀದಿಸಲು ವರ್ಷಗಟ್ಟಲೆ ಕೂಡಿಟ್ಟ ಕಾಯಿನ್ ಗಳ ಮೂಲಕ ಹಣ ಪಾವತಿಸಿದ್ದಾನೆ. ಇಂತಹದೊಂದು ಘಟನೆ ಅಸ್ಸಾಂನಲ್ಲಿ ನಡೆದಿದೆ.
ಹೌದು, ಕರೀಂಗಂಜ್ ಜಿಲ್ಲೆಯ ಸೂರಜನ್ ರಾಯ್ ಎಂಬ ಈ ಯುವಕ 50,000 ರೂಪಾಯಿಗಳಿಗೂ ಅಧಿಕ ಮೊತ್ತದ ಬೈಕ್ ಖರೀದಿಸಲು ತಾನು ಕೂಡಿಟ್ಟ ಒಂದು ರೂಪಾಯಿ, ಎರಡು ರೂಪಾಯಿ, ಐದು ರೂಪಾಯಿ, ಹತ್ತು ರೂಪಾಯಿ ಮೌಲ್ಯದ ಕಾಯಿನ್ ಗಳನ್ನು ತಂದಿದ್ದಾನೆ.
ಈತನಿಗೆ ಸ್ಪಂದಿಸಿದ ಶೋರೂಮ್ ಸಿಬ್ಬಂದಿ, ಕಾಯಿನ್ ಗಳನ್ನು ಪಡೆದು ಗಂಟೆಗಟ್ಟಲೆ ಎಣಿಸಿ ಆತ ಇಷ್ಟಪಟ್ಟ ಅಪಾಚೆ 460 ವಿ ಬೈಕನ್ನು ನೀಡಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.