ಬೈಕ್ ಅಪಘಾತದಲ್ಲಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಟೆಕ್ಕಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗವಿಮಠದ ಬಳಿ ನಡೆದಿದೆ.
27 ವರ್ಷದ ಸೂರಜ್ ಮೃತಪಟ್ಟವರಾಗಿದ್ದು, ಈತ ಇಂದು ಬೆಳಗ್ಗೆ ತನ್ನ ಸ್ನೇಹಿತ ಅಜಯ್ ಜೊತೆ ಡುಕಾತಿ ಬೈಕ್ನಲ್ಲಿ ಅತಿವೇಗವಾಗಿ ಬರುತ್ತಿರುವಾಗ ವಾಹನವೊಂದಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದೆ.
ಇದರ ಪರಿಣಾಮ ಗವಿಮಠದ ಬಳಿಯ ರಾಷ್ಟ್ರೀಯ ಹೆದ್ದಾರಿ 72ರ ಸೇತುವೆ ಮೇಲಿಂದ ಉರುಳಿಬಿದ್ದು ಸೂರಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.