ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿರೋ ಘಟನೆಯೊಂದು ವೈರಲ್ ಆಗಿದೆ. ನಡುರಸ್ತೆಯಲ್ಲಿ ಮಹಿಳೆಯೊಳು ಬೈಕ್ ಸವಾರನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಜಬಲ್ಪುರದ ಒಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದು.
ಯುವಕ ಬೈಕ್ನಲ್ಲಿ ತೆರಳ್ತಾ ಇದ್ದ, ಮೊಪೆಡ್ನಲ್ಲಿ ಬಂದ ಮಹಿಳೆ ಬೈಕ್ಗೆ ಡಿಕ್ಕಿ ಹೊಡೆದಿದ್ದಾಳೆ. ಆದ್ರೆ ಜೋರಾಗೇನೂ ಡಿಕ್ಕಿ ಹೊಡೆಯದೇ ಇದ್ದಿದ್ರಿಂದ ಯಾವುದೇ ಅಪಾಯವಾಗಿಲ್ಲ. ಆದ್ರೂ ಸುಮ್ಮನಾಗದ ಮಹಿಳೆ ತನ್ನ ಕಾಲಲ್ಲಿದ್ದ ಚಪ್ಪಲಿ ತೆಗೆದು ಆ ಯುವಕನಿಗೆ ಥಳಿಸಿದ್ದಾಳೆ.
ಸುತ್ತಮುತ್ತ ಇದ್ದ ಜನರು ಯುವಕನಿಗೆ ಸಹಾಯ ಮಾಡಲು ಬಂದಿಲ್ಲ. ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೊನೆಗೆ ಅವರಲ್ಲಿ ಕೆಲವರು ಮಹಿಳೆಯನ್ನು ತಡೆಯಲು ಯತ್ನಿಸಿದ್ರು. ಆದ್ರೆ ಯಾವ ಮಾತಿಗೂ ಸೊಪ್ಪು ಹಾಕದ ಆಕೆ, ಯುವಕನನ್ನು ಮನಬಂದಂತೆ ಥಳಿಸಿದ್ದಾಳೆ. ತಾನೇ ಡಿಕ್ಕಿ ಹೊಡೆದು ತಪ್ಪು ಮಾಡಿರೋ ಮಹಿಳೆ, ಅನ್ಯಾಯವಾಗಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯ.
ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಏಟು ತಿಂದ ಯುವಕ ಹಾಗೂ ಹಲ್ಲೆ ಮಾಡಿದ ಮಹಿಳೆಗಾಗು ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.