
ಇಂತಹದ್ದೇ ಘಟನೆಗೆ ವಿಡಿಯೋವೊಂದು ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ತನ್ನ ಸಂಗಾತಿಯೊಂದಿಗೆ ತನ್ನ ತಪ್ಪಿನಿಂದಲೇ ದ್ವಿಚಕ್ರ ವಾಹನ ಚಲಾಯಿಸುತ್ತಿರುವಾಗ ರಸ್ತೆ ಮಧ್ಯದಲ್ಲಿ ಬಿದ್ದಿದ್ದಾಳೆ. ಆದರೆ, ಅಪಘಾತಕ್ಕೆ ಹಿಂದೆ ಬರುತ್ತಿದ್ದ ವಾಹನ ಸವಾರನೇ ಕಾರಣ ಎಂದು ವರಾತ ತೆಗೆದಿದ್ದಾಳೆ.
ಈ ವಿಡಿಯೋ ನಕಲಿ ಎಂದು ಹಲವರು ಹೇಳಿದ್ದಾರಾದರೂ, ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಸವಾರನ ಹೆಲ್ಮೆಟ್ ನಲ್ಲಿದ್ದ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿವೆ.
ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಮಹಿಳೆ ಬ್ಯಾಲೆನ್ಸ್ ಕಳೆದುಕೊಂಡು ತನ್ನ ಸಂಗಾತಿ ಜೊತೆ ಕೆಳಗೆ ಬಿದ್ದಿರುವುದು ಈ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾಪ ಹಿಂದೆ ಬರುತ್ತಿದ್ದ ಯುವಕ ತನ್ನ ಬೈಕ್ ನಿಲ್ಲಿಸಿ, ಕೆಳಗೆ ಬಿದ್ದವರನ್ನು ಮೇಲಕ್ಕೆತ್ತಿ ಪೆಟ್ಟಾಗಿದೆಯೇ ಎಂದು ವಿಚಾರಿಸಲು ಹೋದರೆ, ಆತನಿಗೇ ಯುವತಿ ಆವಾಜ್ ಹಾಕಿದ್ದಾಳೆ. ನೋಡ್ಕೊಂಡು ಗಾಡಿ ಓಡಿಸೋಕೆ ಆಗೋದಿಲ್ವ. ನಿನ್ನಿಂದಲೇ ನಾವು ಬಿದ್ದದ್ದು ಎಂದು ಕಿಡಿ ಕಾರಿದ್ದಾಳೆ.
ಇದರಿಂದ ಬೆಚ್ಚಿದ ಆ ಯುವಕ, ನನ್ನ ಗಾಡಿ ನಿಮ್ಮ ವಾಹನಕ್ಕೆ ತಾಗಿಯೇ ಇಲ್ಲ. ನಿಮಗೆ ನೀವೇ ಕೆಳಗೆ ಬಿದ್ದಿದ್ದೀರಿ. ಬೇಕಾದರೆ ವಿಡಿಯೋ ಇದೆ ನೋಡಿ ಎಂದು ಹೇಳಿದ್ದಾನೆ.
ಈ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ ಮತ್ತು 1 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ.