ಏರುತ್ತಿರುವ ತಾಪಮಾನ, ಬಿರು ಬೇಸಿಗೆ ಸಂಭೋಗದಿಂದ ದೂರವಿರುವಂತೆ ಮಾಡ್ತಿದೆ. ಆದ್ರೆ ಹವಾಮಾನ ಎಷ್ಟೆ ಬಿಸಿಯಾಗಿದ್ರೂ ಪ್ರೀತಿ ಹಾಗೂ ರೋಮ್ಯಾನ್ಸ್ ಸದಾ ಇರುವಂತೆ ಮಾಡಲು ಕೆಲ ಟಿಪ್ಸ್ ಗಳಿಗೆ. ಬೇಸಿಗೆಯಲ್ಲಿ ಈ ಟಿಪ್ಸ್ ಅನುಸರಿಸಿ ಲೈಫ್ ಎಂಜಾಯ್ ಮಾಡಿ.
ಬೇಸಿಗೆ ಸಂದರ್ಭದಲ್ಲಿ ನೀರು ಎಲ್ಲರ ಅಚ್ಚುಮೆಚ್ಚು. ನೀರಿರುವ ಕಡೆ, ತಂಪಾದ ಜಾಗವನ್ನು ಮನಸ್ಸು ಬಯಸುತ್ತದೆ. ಮನೆಯಲ್ಲಿ ನಿಮ್ಮದೇ ಈಜುಕೊಳವಿದ್ರೆ ಯಾವುದೇ ಒತ್ತಡ ಬೇಡ. ಬಿರು ಬೇಸಿಗೆಯಲ್ಲೂ ಈಜು ಕೊಳದಲ್ಲಿ ಸಂಗಾತಿ ಜೊತೆ ಕೆಲ ಸಮಯ ಕಳೆಯಬಹುದು. ಈಜುಕೊಳವಿಲ್ಲ ಎನ್ನುವವರು ಕಡಲತೀರಗಳಿಗೆ ಹೋಗಿ ಬನ್ನಿ. ಕಡಿಮೆ ಜನರಿರುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ತಂಪಾದ ಸ್ಥಳದಲ್ಲಿ ಸಂಗಾತಿ ಜೊತೆ ಅಮೂಲ್ಯ ಸಮಯ ಕಳೆಯಿರಿ.
ಬೇಸಿಗೆಯಲ್ಲಿ ಹಣ್ಣುಗಳು ದೇಹವನ್ನು ತಂಪಾಗಿಡಲು ನೆರವಾಗುತ್ತವೆ. ಬೇಸಿಗೆಯಲ್ಲಿ ಅತಿ ಹೆಚ್ಚು ಹಣ್ಣು ಸೇವನೆ ಜೊತೆಗೆ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ಸಂಗಾತಿ ಜೊತೆ ಈ ಹಣ್ಣಿನ ಉಪಯೋಗ ಮಾಡಬಹುದು. ಕೆಲವೊಂದು ಭಾಗಕ್ಕೆ ಹಣ್ಣಿನ ಸ್ಪರ್ಶವಾಗ್ತಿದ್ದಂತೆ ದೇಹ ಉತ್ತೇಜನಗೊಳ್ಳುತ್ತದೆ. ಮನಸ್ಸು ಸಂಭೋಗ ಬಯಸುತ್ತದೆ.
ಬೇಸಿಗೆಯಲ್ಲಿ ತಾಪಮಾನ ಕಡಿಮೆ ಮಾಡಲು ಐಸ್ ಕ್ಯೂಬ್ ಬೆಸ್ಟ್. ಬೆಡ್ ರೂಮಿಗೆ ಐಸ್ ಕ್ಯೂಬ್ ತರುವುದನ್ನು ಮರೆಯಬೇಡಿ. ನಿಧಾನವಾಗಿ ಐಸ್ ಕ್ಯೂಬ್ ಗಳ ಸಣ್ಣ ಸಣ್ಣ ತುಂಡುಗಳನ್ನು ಸಂಗಾತಿ ದೇಹಕ್ಕೆ ಓಡಾಡಿಸಿ. ಇದು ಸೆಕ್ಸ್ ವೇಳೆ ನಿಮ್ಮ ದೇಹದಿಂದ ಹೊರಬರುವ ಶಾಖವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಬೇಸಿಗೆಯಲ್ಲಿ ಬೆಡ್ ರೂಮಿಗಿಂತ ಸಂಭೋಗಕ್ಕೆ ಬಾತ್ ರೂಂ ಬೆಸ್ಟ್. ಆದ್ರೆ ಯೋನಿ ಶುಷ್ಕವಾಗುವ ಸಾಧ್ಯತೆಯಿರುತ್ತದೆ. ಹಾಗೆ ಸೋಂಕುಗಳು ಕಾಡುವ ಸಾಧ್ಯತೆಯಿರುತ್ತದೆ. ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡ ಮೇಲೆ ಬಾತ್ ರೂಂನಲ್ಲಿ ಸಂಬಂಧ ಬೆಳೆಸಲು ಮುಂದಾಗಿ.