ಲಸ್ಸಿ ಬಾಯಿಗೆ ರುಚಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟಪಡ್ತಾರೆ. ನಾಲಿಗೆಗೆ ರುಚಿ ಎನಿಸುವ ಈ ಲಸ್ಸಿ ಆರೋಗ್ಯಕ್ಕೂ ಒಳ್ಳೆಯದು. ದಿನನಿತ್ಯ ಒಂದು ಗ್ಲಾಸ್ ಲಸ್ಸಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.
ದೇಹದ ಉಷ್ಣತೆಯನ್ನು ಲಸ್ಸಿ ನಿಯಂತ್ರಿಸುತ್ತದೆ. ಲಸ್ಸಿಯಲ್ಲಿರುವ ಎಲೆಕ್ಟ್ರೋಲೈಟ್ ಹಾಗೂ ನೀರಿನ ಪ್ರಮಾಣ, ದೇಹ ತೇವಾಂಶದಿಂದ ಕೂಡಿರಲು ಸಹಾಯವಾಗುತ್ತದೆ. ಇದ್ರಿಂದ ದೇಹದ ಶಾಖ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ.
ಲಸ್ಸಿ ದೇಹಕ್ಕೆ ತಂಪು ನೀಡುತ್ತದೆ. ಹಾಗಾಗಿ ಎಸಿಡಿಟಿ ಸಮಸ್ಯೆಯಿರುವವರು ಪ್ರತಿದಿನ ಲಸ್ಸಿ ಸೇವನೆ ಮಾಡಬೇಕು.
ಲಸ್ಸಿಯಲ್ಲಿ ಲ್ಯಾಕ್ಟಿನ್ ಅಂಶ ಹಾಗೂ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಪ್ರತಿರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ದೇಹಕ್ಕೆ ಒಳ್ಳೆಯದು. ಲಸ್ಸಿ ಇರಲಿ ಇಲ್ಲ ಮೊಸರಿರಲಿ ಇವು ಜೀರ್ಣಶಕ್ತಿಗೆ ಸಹಾಯ ಮಾಡುತ್ತವೆ.