ಬೇಸಿಗೆ ಬಿಸಿಲಲ್ಲಿ ಬಳಲಿಕೆ ಜಾಸ್ತಿ. ಸ್ವಲ್ಪ ನಡೆದಾಡಲೂ ಕೂಡ ಕಷ್ಟಪಡುತ್ತಾರೆ ಕೆಲವರು. ಅದಕ್ಕೆ ಕಾರಣ ಅವರು ಸೇವಿಸುವ ಆಹಾರ ಕ್ರಮ.
ಬಿಸಿಲಿನ ಹೊಡೆತ ತಡೆದುಕೊಳ್ಳುವುದು ಕಷ್ಟ. ಬಾಯಾರಿಕೆ ಅತಿಯಾದ ಸುಸ್ತು. ಮೈ ಉರಿ ಮೊದಲಾದ ತೊಂದರೆ ಕಾಣಿಸಿಕೊಳ್ಳುತ್ತವೆ.
ಇದರಿಂದ ಹೊರಬರಲು ನೀವು ಒಂದಿಷ್ಟು ಕ್ರಮಗಳನ್ನು ಅನುಸರಿಸಿ. ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ. ತಂಪಾದ ಪಾನೀಯ, ಮಿತವಾದ ಆಹಾರ ಸೇವನೆ ಮಾಡುವುದು ಒಳ್ಳೆಯದು. ಹೊಟ್ಟೆ ಬಿರಿಯುವಷ್ಟು ಊಟ ಮಾಡಬೇಡಿ. ಇದರಿಂದ ಅಜೀರ್ಣದ ತೊಂದರೆ ಕಾಣಿಸಿಕೊಳ್ಳುತ್ತವೆ.
ಜಾಸ್ತಿ ಹುಳಿ, ಖಾರದ ಪದಾರ್ಥಗಳನ್ನು ಸೇವಿಸಬಾರದು. ಸುಲಭವಾಗಿ ಜೀರ್ಣವಾಗುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು.
ತರಕಾರಿ ಬಳಸುವಾಗಲು ಗಮನವಿರಲಿ. ಆದಷ್ಟು ಮೊಸರು, ಮಜ್ಜಿಗೆ, ಹಣ್ಣಿನ ರಸ, ಪಾನಕ, ಹಣ್ಣುಗಳನ್ನು ಸೇವಿಸಿ. ಮಸಾಲೆ ಪದಾರ್ಥಗಳು ಜಾಸ್ತಿ ಇರುವ ಆಹಾರ ಸೇವಿಸಬೇಡಿ. ನೀರು ಹೆಚ್ಚಾಗಿ ಕುಡಿಯಿರಿ.