ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಆ ಬಗ್ಗೆ ಕೆಲವು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಬೇಕು.
* ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು.
* ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಸೇರಿಸಿ ಕುಡಿಯಬೇಕು.
* ಕಾಫಿ – ಟೀಗಳಿಗಿಂತ ಜ್ಯೂಸನ್ನು ಸೇವಿಸಿದರೆ ದೇಹವನ್ನು ತಂಪಾಗಿಡಬಹುದು.
* ಸಾಧ್ಯವಾದಷ್ಟು ಕಾಟನ್ ಉಡುಪನ್ನೇ ಧರಿಸಿ. ಇದರಿಂದ ದೇಹದ ಉಷ್ಣವನ್ನು ತಡೆಯಬಹುದು.
* ಕೂದಲನ್ನು ಬಿಚ್ಚಿ ಬಿಡುವುದರಿಂದ ಬೆವರುವುದು ಜಾಸ್ತಿಯಾಗುತ್ತದೆ. ಕೂದಲನ್ನು ಪೋನಿಟೈಲ್ ಅಥವಾ ಜಡೆ ಹೆಣೆಯಿರಿ.
* ಸಂಜೆಯ ತಿಂಡಿಗೆ ಕರಿದ ಪದಾರ್ಥಗಳಿಗಿಂತ ಫ್ರೂಟ್ ಸಾಲಡ್, ವೆಜಿಟೇಬಲ್ ಸಾಲಡ್ ಗಳನ್ನು ತಿನ್ನುವುದು ಒಳ್ಳೆಯದು.
* ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಹಿತಕರವೆನಿಸಿದರೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.
* ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹಾಗೇ ಹೋಗಲೇ ಬೇಕಾದರೆ ಕ್ಯಾಪ್, ಸ್ಕಾರ್ಫ್ ಧರಿಸಿ ಇಲ್ಲವೇ ಕೊಡೆಯನ್ನು ಬಳಸುವುದು ಉತ್ತಮ.