ಬೇಸಿಗೆ ಕಾಲ ಶುರುವಾಗಿದೆ. ಈಗ ಏನಿದ್ದರೂ ತಂಪು ತಂಪಾಗಿರುವುದನ್ನು ಸವಿಯಬೇಕು ಎಂಬ ಆಸೆ ಆಗುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕೆ ಭಯಪಡುವವರು ಮನೆಯಲ್ಲಿಯೇ ಕುಲ್ಫಿ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ.
ಮೊದಲಿಗೆ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆ ಇಡಿ. ಅದಕ್ಕೆ ಒಂದು ಲೀಟರ್ ಹಾಲನ್ನು ಬಿಸಿ ಮಾಡುವುದಕ್ಕೆ ಹಾಕಿ. ಹಾಲು ದಪ್ಪಗಾಗುವವರೆಗೂ ಚೆನ್ನಾಗಿ ತಿರುಗಿಸುತ್ತಾ ಇರಿ. ನಂತರ 1 ಕಪ್ ಸಕ್ಕರೆ ಸೇರಿಸಿ ಮತ್ತೆ ಕೈಯಾಡಿಸುತ್ತಾ ಇರಿ. ಹಾಲು ಸಕ್ಕರೆ ಸೇರಿಸಿದ ನಂತರ ಈ ಮಿಶ್ರಣದ ಬಣ್ಣ ತುಸು ಕಂದು ಬಣ್ಣ ಬರುವವರಗೆ ಕೈಯಾಡಿಸುತ್ತಾ ಇರಿ. ಸ್ವಲ್ಪ ದಪ್ಪ ಆಗುವವರೆಗೆ ತಿರುಗಿಸಿ ನಂತರ ಇದನ್ನು ತಣ್ಣಗಾಗುವುದಕ್ಕೆ ಬಿಡಿ.
ಆಮೇಲೆ ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಟೀ ಕಪ್ ಅಥವಾ ಕುಲ್ಪಿ ಮೌಲ್ಡ್ ನಲ್ಲಿ ಹಾಕಿ. ಇದಕ್ಕೆ ಐಸ್ ಕ್ರೀಂ ಸ್ಟಿಕ್ ಅನ್ನು ಹಾಕಿ ನಂತರ ಫ್ರಿಜರ್ ನಲ್ಲಿಡಿ. 8 ಗಂಟೆ ನಂತರ ಇದನ್ನು ಹೊರಕ್ಕೆ ತೆಗೆದರೆ ರುಚಿಕರವಾದ ಕುಲ್ಫಿ ರೆಡಿ.