alex Certify ಬೇಸಿಗೆಯಲ್ಲಿ ಸವಿಯಿರಿ ತಂಪಾದ ಬಾದಾಮಿ ಹಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಸವಿಯಿರಿ ತಂಪಾದ ಬಾದಾಮಿ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ.ಬೇಕಾಗುವ ಸಾಮಾಗ್ರಿಗಳು:

1 ಲೀಟರ್ – ಹಾಲು, 15 – 20 ಕೇಸರಿ ದಳ (ಸ್ವಲ್ಪ ಹಾಲಿನಲ್ಲಿ ನೆನೆಸಿಡಿ), 20 – ಬಾದಾಮಿ, ¼ ಕಪ್ – ಸಕ್ಕರೆ, ಏಲಕ್ಕಿ ಪುಡಿ – 1/2 ಟೀ ಸ್ಪೂನ್.

ಮಾಡುವ ವಿಧಾನ:

ಮೊದಲಿಗೆ ಬಾದಾಮಿಯನ್ನು ½ ಗಂಟೆ ಹೊತ್ತು ನೀರಿನಲ್ಲಿ ನೆನೆಸಿಡಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ¼ ಕಪ್ ಹಾಲು ಹಾಕಿ ರುಬ್ಬಿಕೊಳ್ಳಿ.

ನಂತರ ಒಂದು ದಪ್ಪ ತಳದ ಪಾತ್ರೆಗೆ ಹಾಲು ಹಾಕಿ ಹಾಲು ಕುದಿಯಲು ಆರಂಭಿಸಿದಾಗ ಅದಕ್ಕೆ ರುಬ್ಬಿದ ಬಾದಾಮಿ ಹಾಕಿ ನಂತರ ನೆನೆಸಿಟ್ಟುಕೊಂಡ ಕೇಸರಿದಳ ಸೇರಿಸಿ.

25 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸಕ್ಕರೆ ಏಲಕ್ಕಿ ಪುಡಿ ಸೇರಿಸಿ ಸ್ವಲ್ಪ ಹೊತ್ತು ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ತಣ್ಣಗಾದ ನಂತರ ಫ್ರಿಡ್ಜ್ ನಲ್ಲಿಡಿ ನಂತರ ಸರ್ವ್ ಮಾಡಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...