ಬೇಸಿಗೆ ಬಂತು ಅಂದ್ರೆ ಸಮುದ್ರ ತೀರ ಕೈ ಬೀಸಿ ಕರೆಯುತ್ತದೆ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಸಮುದ್ರ ತೀರಕ್ಕಿಂತಲೂ ಅತ್ಯುತ್ತಮ ಪ್ರವಾಸ ಯಾವುದಿದೆ ಅಲ್ವಾ? ಆದ್ರೆ ಉಪ್ಪು ನೀರು, ಬಿಸಿಲಿನಿಂದ ತ್ವಚೆ ಟ್ಯಾನ್ ಆಗುವುದಷ್ಟೇ ಅಲ್ಲದೇ ಹೊಳಪನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ನೀವು ಕೂಡ ಈ ಬಾರಿ ಯಾವುದಾದರೂ ಬೀಚ್ಗೆ ಹೋಗುವ ಪ್ಲಾನ್ನಲ್ಲಿದ್ರೆ ತಪ್ಪದೇ ಈ ಬ್ಯೂಟಿ ಟಿಪ್ಸ್ಗಳನ್ನು ಫಾಲೋ ಮಾಡಿ.
ಸನ್ಸ್ಕ್ರೀನ್ ಲೋಷನ್: ಎಸ್ಪಿಎಫ್ 30 ಕ್ಕಿಂತ ಹೆಚ್ಚಿರುವ ಸನ್ಸ್ಕ್ರೀನ್ ಲೋಷನ್ ಅನ್ನು ತಪ್ಪದೇ ಮುಖ, ಕೈ ಕಾಲುಗಳಿಗೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ತ್ವಚೆಗೆ ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಣೆ ಸಿಗುತ್ತದಲ್ಲದೇ ಟ್ಯಾನ್ ಆಗುವುದನ್ನು ತಪ್ಪಿಸಬಹುದು.
ಹೇರ್ ಕ್ಯಾಪ್: ಸಮುದ್ರದ ನೀರಿನಲ್ಲಿ ಆಡುವಾಗ ಉಪ್ಪು ನೀರಿನಿಂದ ತಲೆಕೂದಲನ್ನು ಕಾಪಾಡಿಕೊಳ್ಳಲು ಹೇರ್ ಕ್ಯಾಪ್ ಧರಿಸಬಹುದು.
ಒದ್ದೆ ತಲೆ ಮಾಡಿಕೊಳ್ಳಿ : ತಲೆಕೂದಲನ್ನು ನೀರಿನಿಂದ ತೊಳೆದು ನಂತರ ಸಮುದ್ರಕ್ಕೆ ಇಳಿಯುವುದು ಉತ್ತಮ. ಹೀಗೆ ಮಾಡುವುದರಿಂದ ಉಪ್ಪು ನೀರು ನೇರವಾಗಿ ಕೂದಲಿಗೆ ಇಳಿಯುವುದಿಲ್ಲ ಅದರ ತೀವ್ರತೆ ಕಡಿಮೆ ಇರುತ್ತದೆ.
ವಾಟರ್ ಫ್ರೂಫ್ ಲೈನರ್ ಮತ್ತು ಲಿಪ್ಸ್ಟಿಕ್ : ಬೀಚ್ಗಳಲ್ಲಿನ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಫೋಟೋ ತೆಗೆಯುವ ಮನಸಿದ್ರೆ ವಾಟರ್ ಪ್ರೂಫ್ ಲಿಪ್ಸ್ಟಿಕ್ ಮತ್ತು ಕಾಡಿಗೆ ಬಳಸಬಹುದು. ಇದರಿಂದ ಮೇಕಪ್ ನೀರಿನಿಂದ ಹಾಳಾಗುವದಿಲ್ಲ, ಎಲ್ಲೂ ಕೂಡ ಸ್ಮಡ್ಜ್ ಆಗುವುದಿಲ್ಲ.
ಹಾಲಿನಿಂದ ಕ್ಲೆನ್ಸ್ ಮಾಡಿ : ಇನ್ನೂ ಉಪ್ಪು ನೀರಿನಿಂದ ಹೊರ ಬಂದ ನಂತರ ಶುಭ್ರವಾದ ನೀರಿನಿಂದ ಸ್ವಚ್ಚ ಮಾಡಿಕೊಳ್ಳಿ. ಬಳಿಕ ಹಾಲನ್ನು ಹತ್ತಿ ಬಟ್ಟೆಯಲ್ಲಿ ಅದ್ದಿ ಕ್ಲೆನ್ಸಿಂಗ್ ಮಾಡಿಕೊಳ್ಳಬೇಕು. ಇದು ಸನ್ ಬರ್ನ್ ತಪ್ಪಿಸುತ್ತದೆ ಜೊತೆಗೆ ತ್ವಚೆಗೆ ತಂಪನ್ನು ಎರೆಯುತ್ತದೆ.
ಹರ್ಬಲ್ ಸೋಪು ಮತ್ತು ಶ್ಯಾಂಪು ಬಳಸಿ : ಬೀಚ್ಗಳಲ್ಲಿ ಆಡಿದ ಬಳಿಕ ಯಾವುದೇ ಕಾರಣಕ್ಕೂ ಕೆಮಿಕಲ್ ಉತ್ಪನ್ನಗಳ ಬಳಕೆ ಬೇಡ. ಬದಲಿಗೆ ಹರ್ಬಲ್ ಸೋಪು ಮತ್ತು ಶ್ಯಾಂಪು ಬಳಸುವುದರಿಂದ ತ್ವಚೆ ಮತ್ತು ಕೂದಲಿನ ಆರೋಗ್ಯ ಸ್ಥಿರವಾಗಿರತ್ತದೆ.