ಬೇಸಿಗೆಯಲ್ಲಿ ತ್ವಚೆಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚು. ಸ್ವಲ್ಪ ಹೊತ್ತು ಬಿಸಿಲಲ್ಲಿ ಓಡಾಡಿದ್ರೂ ಚರ್ಮ ಸುಟ್ಟಂತೆ ಕಪ್ಪಗಾಗುತ್ತದೆ. ಈ ಟ್ಯಾನಿಂಗ್ ಸಮಸ್ಯೆಯನ್ನು ಹೋಗಲಾಡಿಸಲು ನೀವು ದುಬಾರಿ ಕ್ರೀಮ್ ಅಥವಾ ಇನ್ನಿತರ ಉತ್ಪನ್ನಗಳನ್ನು ಖರೀದಿ ಮಾಡಬೇಡಿ. ಅತ್ಯಂತ ಈಸಿಯಾಗಿ ಮನೆಯಲ್ಲೇ ಟ್ಯಾನ್ ರಿಮೂವ್ ಮಾಡುವುದು ಹೇಗೆ ಅನ್ನೋದನ್ನು ನಾವ್ ಹೇಳ್ತೀವಿ.
ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಆಲೂಗಡ್ಡೆ ಸ್ಕಿನ್ ಟ್ಯಾನಿಂಗ್ ಅನ್ನು ಹೋಗಲಾಡಿಸುತ್ತದೆ. ಮುಖದ ಹೊಳಪನ್ನು ಕೂಡ ಹೆಚ್ಚಿಸುತ್ತದೆ. ಆಲೂಗಡ್ಡೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಕಬ್ಬಿಣ, ಪೊಟಾಶಿಯಂ, ವಿಟಮಿನ್-ಎ, ವಿಟಮಿನ್-ಡಿ ಮುಂತಾದ ಸತ್ವಗಳಿವೆ.
ಕಣ್ಣಿಗೆ ತಂಪು ನೀಡಲು ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಳ್ತಾರೆ. ಅದೇ ರೀತಿ ನೀವು ಸರಿಯಾದ ರೀತಿಯಲ್ಲಿ ತ್ವಚೆಗೆ ಹಸಿ ಆಲೂಗಡ್ಡೆಯನ್ನು ಬಳಸಿದರೆ ಸಾಕಷ್ಟು ಪ್ರಯೋಜನ ದೊರೆಯುತ್ತದೆ. ನಿಮ್ಮ ಮುಖದ ಮೇಲೆ ಸಾಕಷ್ಟು ಟ್ಯಾನಿಂಗ್ ಇದ್ದರೆ, ನೀವು ಆಲೂಗಡ್ಡೆ ಫೇಸ್ ಪ್ಯಾಕ್ ಅನ್ನು ಅನ್ವಯಿಸಬೇಕು.
ಇದಕ್ಕಾಗಿ ನೀವು ಆಲೂಗಡ್ಡೆ, ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಳ್ಳಿ. ಆಲೂಗಡ್ಡೆಯನ್ನು ತುರಿದು ಅದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಅನ್ನು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಈ ರೀತಿ ಪ್ರತಿನಿತ್ಯ ಒಂದು ಬಾರಿಯಂತೆ 7 ದಿನಗಳ ಕಾಲ ಮಾಡಿದ್ರೆ ಟ್ಯಾನಿಂಗ್ ಸಂಪೂರ್ಣ ಹೊರಟು ಹೋಗುತ್ತದೆ. ಮುಖವೂ ಕಾಂತಿಯುಕ್ತವಾಗುತ್ತದೆ.