3 ಮಾವಿನಕಾಯಿ, 3 ಕಪ್ ನೀರು, 10 ಕಾಳು- ಕಾಳುಮೆಣಸು, ½ ಇಂಚು-ಶುಂಠಿ, 3/4 ಕಪ್ ಸಕ್ಕರೆ, 2 ಟೀ ಸ್ಪೂನ್-ಸೊಂಪು (2 ಗಂಟೆ ನೆನೆಸಿಟ್ಟಿದ್ದು. ½ ಕಪ್-ಪುದೀನಾ, 3 ಟೀ ಸ್ಪೂನ್-ಉಪ್ಪು, ½ ಟೀ ಸ್ಪೂನ್-ಏಲಕ್ಕಿ ಪುಡಿ, 3 ಟೀ ಸ್ಪೂನ್- ಜೀರಿಗೆ ಪುಡಿ.
ಮಾಡುವ ವಿಧಾನ:
ಮೊದಲು ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಈ ಮಾವಿನಕಾಯಿ ಹಾಕಿ 3 ಕಪ್ ನೀರು ಹಾಕಿ ಅದಕ್ಕೆ ಕಾಳು ಮೆಣಸು, ಶುಂಠಿ ಹಾಕಿ ಮಾವಿನಕಾಯಿ ಬೇಯುವವರಗೆ ಬೇಯಿಸಿಕೊಳ್ಳಿ.
ನಂತರ ಇದನ್ನು ತಣ್ಣಗಾಗಲು ಬಿಡಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ. ನಂತರ ಅದಕ್ಕೆ ಸಕ್ಕರೆ, ನೆನೆಸಿಟ್ಟ ಸೋಂಪು ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಇದನ್ನು ಶೋಧಿಸಿಕೊಳ್ಳಿ. ನಂತರ ಇದಕ್ಕೆ 5 ಕಪ್ ನೀರು ಸೇರಿಸಿ.
ನಂತರ ಪುದೀನಾ ಎಲೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ 1 ಕಪ್ ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಮಾವಿನ ಕಾಯಿ ಮಿಶ್ರಣಕ್ಕೆ ಹಾಕಿ. ನಂತರ ಇದಕ್ಕೆ 3 ಟೀ ಸ್ಪೂನ್ ಉಪ್ಪು ಹಾಕಿ, ½ ಟೀ ಸ್ಪೂನ್-ಏಲಕ್ಕಿ ಪುಡಿ, 3 ಟೀ ಸ್ಪೂನ್ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.