ಬೇವಿನ ಸೊಪ್ಪು ಸರ್ವರೋಗಕ್ಕೂ ಮದ್ದು ಇದ್ದಂತೆ. ಚರ್ಮದಲ್ಲಿ ಯಾವುದೇ ರೀತಿಯ ಅಲರ್ಜಿ ಇದ್ದರೆ, ಬೇವಿನ ನೀರಿನಿಂದ ಸ್ನಾನ ಮಾಡಲು ಶಿಫಾರಸು ಮಾಡ್ತಾರೆ. ಬೇವಿನ ರಸ ಕೂಡ ಯಾವ ಔಷಧಿಗೂ ಕಡಿಮೆಯಿಲ್ಲ.
ಬೇವಿನ ರಸ ಅತ್ಯಂತ ಕಹಿಯಾಗಿರೋದ್ರಿಂದ ಇದನ್ನು ಕುಡಿಯೋದು ಕಷ್ಟವೇ. ಆದ್ರೆ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದು ತೂಕವನ್ನು ನಿಯಂತ್ರಿಸಲು ಮತ್ತು ಚರ್ಮವನ್ನು ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ.
ಒಸಡುಗಳ ಸಮಸ್ಯೆಯನ್ನು ಹೋಗಲಾಡಿಸಲು ಬೇವಿನ ರಸ ತುಂಬಾ ಪ್ರಯೋಜನಕಾರಿ. ಬೇವಿನ ರಸವನ್ನು ಕುಡಿದರೆ ವಸಡು ಮತ್ತು ಹಲ್ಲುಗಳ ಸಮಸ್ಯೆ ನಿವಾರಣೆಯಾಗುತ್ತದೆ. ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಬೇವಿನ ಕಡ್ಡಿಗಳನ್ನು ಹಲ್ಲುಗಳನ್ನು ಸ್ವಚ್ಛ ಮಾಡಲು ಬಳಸಲಾಗುತ್ತಿತ್ತು. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ನೋಡಿಕೊಳ್ಳುತ್ತದೆ.
ನೀವು ಬೇವಿನ ರಸವನ್ನು ಮೌತ್ ವಾಶ್ ಆಗಿ ಬಳಸಬಹುದು. ಬೇವಿನ ರಸವನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ದೇಹದಲ್ಲಿರೋ ಕೊಳೆ ಹೊರಹೋದ್ರೆ ನಿಮ್ಮ ಚರ್ಮವು ಇನ್ನಷ್ಟು ಕಾಂತಿಯುಕ್ತವಾಗುತ್ತದೆ.
ತೂಕವನ್ನು ನಿಯಂತ್ರಿಸುವಲ್ಲಿ ಬೇವಿನ ರಸವು ತುಂಬಾ ಪ್ರಯೋಜನಕಾರಿ ಅನ್ನೋದು ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ. ಬೇವಿನ ರಸ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗಾಗಿ ನಿಮ್ಮ ದೇಹವು ಕ್ಯಾಲೊರಿಗಳನ್ನು ಬೇಗ ಬರ್ನ್ ಮಾಡುತ್ತದೆ. ಇದರಿಂದ ಬಹುಬೇಗ ತೂಕ ಕಡಿಮೆ ಮಾಡಬಹುದು.