alex Certify ಬೇಸಿಗೆಯಲ್ಲಿ ಪ್ರತಿದಿನ ʼಮೊಸರುʼ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಪ್ರತಿದಿನ ʼಮೊಸರುʼ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

Image result for health-benefits-of-curds summer

ಬೇಸಿಗೆ ಕಾಲದಲ್ಲಿ ಪ್ರತಿ ದಿನವೂ ಒಂದು ಕಪ್ ಮೊಸರಿನ ಸೇವನೆ, ಶರೀರವನ್ನು ತಂಪಾಗಿಸುತ್ತದೆ. ನಿತ್ಯ ಮೊಸರು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

* ಬಾಯಿ ಹುಣ್ಣಿನ ಸಮಸ್ಯೆ ಇದ್ದರೆ ಮೊಸರಿನ ಜೊತೆಗೆ ಸ್ಪಲ್ಪ ಜೇನು ತುಪ್ಪ ಬೆರೆಸಿ ಸೇವಿಸಿದರೆ ಬಾಯಿ ಹುಣ್ಣು ಶೀಘ್ರವಾಗಿ ಗುಣ ಹೊಂದುತ್ತದೆ.

* ಅರ್ಜಿರ್ಣದಿಂದ ಬಳಲುತ್ತಿರುವವರು ಒಂದು ಕಪ್ ಮೊಸರಿಗೆ ಕಾಳು ಮೆಣಸಿನ ಪುಡಿ, ಸ್ವಲ್ಪ ಜೀರಿಗೆ ಪುಡಿ ಬೆರೆಸಿ ಸ್ವಲ್ಪ ಸೈಂಧವ ಲವಣವನ್ನು ಮಿಶ್ರ ಮಾಡಿ ಸೇವಿಸುತ್ತಿದ್ದರೆ ಅಜೀರ್ಣ ದೂರವಾಗುತ್ತದೆ.

* ಮೊಸರು ಮುಪ್ಪನ್ನು ಮುಂದೂಡಿ ಯೌವ್ವನವನ್ನು ರಕ್ಷಿಸುತ್ತದೆ.

* ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೊಳೆಗಳ ಬೆಳವಣಿಗೆಗೆ ಪೂರಕವಾಗಿದೆ.

* ಭೇದಿ, ಮಲಬದ್ಧತೆ, ನಿದ್ರಾಹೀನತೆ ಮುಂತಾದ ದಿನನಿತ್ಯದ ರೋಗಗಳಿಗೆ ರಾಮಬಾಣವಾಗಿದೆ.

* ಕಾಮಾಲೆ ರೋಗಕ್ಕೂ ಮೊಸರು ಅತ್ಯಂತ ಪರಿಣಾಮಕಾರಿಯಾಗಿದೆ.

* ನಿತ್ಯ ಮಾತ್ರೆ ಸೇವಿಸುವವರು ಮಜ್ಜಿಗೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡರೆ ಉತ್ತಮ ಪರಿಣಾಮ ದೊರೆಯುತ್ತದೆ.

* ಹಳೆ ಮೊಸರಿಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ತೆಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೀಗೆ 15 ದಿನದವರೆಗೆ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...