ಬೇಸಿಗೆಯಲ್ಲಿ ನಿಮ್ಮ ಕೈ ಹಾಗೂ ಪಾದಗಳು ವಿಪರೀತ ಬೆವರುತ್ತಿದೆಯೇ..? ಇದರಿಂದಾಗಿ ನಿಮಗೆ ಮುಜುಗರ ಉಂಟಾಗಿದೆಯೇ…? ಹಾಗಿದ್ದರೆ ಇಲ್ಲಿ ಕೇಳಿ.
ಬೇಕಿಂಗ್ ಸೋಡಾ ನಿಮ್ಮ ಸಮಸ್ಯೆಗೆ ಅತ್ಯುತ್ತಮ ಪರಿಹಾರ ನೀಡಬಲ್ಲದು. ಉಗುರು ಬೆಚ್ಚಗಿನ ನೀರಿಗೆ 2 ಚಮಚ ಬೇಕಿಂಗ್ ಸೋಡಾ ಸೇರಿಸಿ, ಅರ್ಧ ಗಂಟೆ ಕಾಲ ನಿಮ್ಮ ಕೈ ಮತ್ತು ಕಾಲುಗಳನ್ನು ಅದರಲ್ಲಿ ಮುಳುಗಿಸಿಡಿ. ಬಳಿಕ ಕಾಟನ್ ಬಟ್ಟೆಯಿಂದ ಒರೆಸಿ.
ಹೀಗೆ ಮಾಡಿದರೆ ಸುಮಾರು ಹೊತ್ತಿನ ಕಾಲ ನಿಮ್ಮ ಕೈಕಾಲುಗಳು ಮತ್ತೆ ಬೆವರುವುದಿಲ್ಲ. ರೋಸ್ ವಾಟರ್ ನಿಂದಲೂ ಇದೇ ಪರಿಣಾಮ ಪಡೆಯಬಹುದು. ಇದು ಬೆವರಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ರೋಸ್ ವಾಟರ್ ಅನ್ನು ಸ್ಯಾನಿಟೈಸರ್ ರೀತಿಯಲ್ಲಿ ಕೈಕಾಲುಗಳಿಗೆ ಹಚ್ಚಿಕೊಳ್ಳಿ.
ಇದಕ್ಕೆ ದೇಹವನ್ನು ತಂಪು ಮಾಡುವ ಗುಣವಿದ್ದು ಬೆವರುವುದನ್ನು ಕಡಿಮೆ ಮಾಡುತ್ತದೆ. ಟಾಲ್ಕಂ ಪೌಡರ್ ಹಚ್ಚುವುದರಿಂದ ಬೆವರುವುದು ಕಡಿಮೆಯಾಗುತ್ತದೆ. ಲಿಂಬೆಹಣ್ಣಿನ ರಸದಿಂದಲೂ ಇದೇ ಲಾಭ ಪಡೆದುಕೊಳ್ಳಬಹುದು.