ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು.
ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಂತ ಬೇಸಿಗೆಯಲ್ಲಿ ಇದ್ರ ಸೇವನೆ ಮಾಡುವುದರಿಂದ ದೇಹದ ಶಾಖ ಹೆಚ್ಚಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ.
ಮಾಂಸಹಾರಿ ಆಹಾರ : ಬೇಸಿಗೆ ಕಾಲದಲ್ಲಿ ಮಾಂಸ ಆಹಾರ, ಮೀನು, ಚಿಕನ್, ಸಮುದ್ರಾಹಾರ ಸೇವನೆಯಿಂದ ದೂರವಿರಿ. ಇದು ಹೊಟ್ಟೆಯನ್ನು ಕೆಡಿಸುತ್ತದೆ. ಇದ್ರಿಂದ ಅತಿಸಾರವುಂಟಾಗುವ ಸಾಧ್ಯತೆ ಇದೆ.
ಎಣ್ಣೆಯುಕ್ತ ಜಂಕ್ ಫುಡ್ : ಬರ್ಗರ್, ಬಜ್ಜಿ ಸೇರಿದಂತೆ ಎಣ್ಣೆಯುಕ್ತ ಆಹಾರ ಸೇವನೆ ಬೇಡವೇ ಬೇಡ.
ಟೀ ಅಥವಾ ಕಾಫಿ : ಬಿಸಿ ಬಿಸಿ ಕಾಫಿ ಅಥವಾ ಟೀಯಿಂದ ದೂರವಿರಿ. ಕೆಫೀನ್ ಅಂಶ ಜಾಸ್ತಿ ಇರುವ ಯಾವುದೇ ಡ್ರಿಂಕ್ಸ್ ಬೇಡ.
ಸಾಸ್ : ಈ ಋತುವಿನಲ್ಲಿ ಯಾವುದೇ ರೀತಿಯ ಸಾಸ್ ಸೇವನೆ ಮಾಡಬೇಡಿ. ಅದ್ರಲ್ಲಿ 350 ಕ್ಯಾಲೋರಿ ಇರುತ್ತದೆ. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.