ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಜನರು ತುರಿಕೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ರೂಪ ಪಡೆಯುತ್ತದೆ. ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆ ಮದ್ದನ್ನು ಉಪಯೋಗಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ಒಂದೇ ಪ್ರಮಾಣದಲ್ಲಿ ಉಪ್ಪು, ಅರಿಶಿನ, ಮೆಂತ್ಯೆಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಸ್ನಾನಕ್ಕೂ ಮೊದಲು ಸ್ವಲ್ಪ ನೀರು ಸೇರಿಸಿ ಮೈಗೆ ಹಚ್ಚಿಕೊಳ್ಳಿ. ಐದು ನಿಮಿಷ ಬಿಟ್ಟು ಸ್ನಾನ ಮಾಡಿ.
ತುರಿಕೆಯಿಂದ ಮುಕ್ತಿ ಪಡೆಯಲು ಐಸ್ ಬೆಸ್ಟ್. ತುರಿಕೆ ಕಾಣಿಸಿಕೊಂಡ ಜಾಗದ ಮೇಲೆ ಐಸ್ ಇಡಿ. ನೇರವಾಗಿ ಐಸ್ ದೇಹದ ಮೇಲಿಡಬೇಡಿ. ಬಟ್ಟೆಯೊಳಗೆ ಐಸ್ ಇಟ್ಟು ತುರಿಕೆ ಜಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ.
ಅಲೋವೇರಾ ಚರ್ಮಕ್ಕೆ ಬಹಳ ಒಳ್ಳೆಯದು. ತುರಿಕೆ ಜಾಗಕ್ಕೆ ಅಲೋವೇರಾ ರಸವನ್ನು ಹಚ್ಚಿದ್ರೆ ಹಿತವೆನಿಸುತ್ತದೆ.
ಮುಲ್ತಾನಿ ಮಿಟ್ಟಿಯಿಂದ ಚರ್ಮದ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ತುರಿಕೆಯಾಗುವ ಜಾಗಕ್ಕೆ ಮುಲ್ತಾನಿ ಮಿಟ್ಟಿ ಹಚ್ಚಿದ್ರೆ ಆರಾಮವೆನಿಸುತ್ತದೆ.