ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಅಂತಹ ಆಹಾರ, ಪಾನೀಯಗಳನ್ನೇ ನಾವು ಸೇವಿಸುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಚವನ್‌ಪ್ರಾಶ್ ತಿನ್ನಬಹುದೇ ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಚವನ್‌ಪ್ರಾಶ್ ತಿಂದರೆ ಬೇಸಿಗೆಯಲ್ಲಿ ಮತ್ತಷ್ಟು ದೇಹಕ್ಕೆ ಉಷ್ಣವಾಗಬಹುದು ಎಂಬ ಭಯವಿದೆ.
ಚವನ್‌ಪ್ರಾಶ್‌ನಲ್ಲಿ ಅನೇಕ ಬಗೆಯ ಔಷಧೀಯ ವಸ್ತುಗಳಿವೆ. ಇವೆಲ್ಲವೂ ದೇಹವನ್ನು ಉಷ್ಣವಾಗಿಡಬಲ್ಲ ಪದಾರ್ಥಗಳು. ಹಾಗಾಗಿ ಬೇಸಿಗೆಯಲ್ಲಿ ಇದನ್ನು ತಿಂದರೆ ಗರ್ಮಿ ಆಗಬಹುದು. ಅದರ ಬದಲಾಗಿ ನೀವು ಆಮ್ಲಾ ಅಥವಾ ದೇಹಕ್ಕೆ ತಂಪು ಮಾಡುವಂತಹ ಪದಾರ್ಥಗಳಿಂದ ಮಾಡಿದ ಚವನ್ ಪ್ರಾಶ್ ಸೇವನೆ ಮಾಡಿ.
ಚವನಪ್ರಾಶ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸಿದರೆ, ಪ್ರಯೋಜನದ ಬದಲು ಹಾನಿಯಾಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ಸೇವಿಸುವಾಗ ಜಾಗರೂಕರಾಗಿರಬೇಕು. ಬೇಸಿಗೆಯಲ್ಲಿ ಚವನಪ್ರಾಶ್ ಜಾಸ್ತಿ ತಿಂದರೆ ಅಜೀರ್ಣ, ವಾಯು, ಹೊಟ್ಟೆ ಉಬ್ಬರಿಸುವುದು ಇಂತಹ ಸಮಸ್ಯೆಗಳಾಗುತ್ತವೆ.
ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚವನ್‌ಪ್ರಾಶ್ ತಿಂದರೆ ಚರ್ಮದ ಅಲರ್ಜಿ, ದದ್ದು ಕಾಣಿಸಿಕೊಳ್ಳಬಹುದು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಿಗಳು ಅದನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು, ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು.
ಹಗಲಿನಲ್ಲಿ ಚವನ್‌ಪ್ರಾಶ್ ಸೇವಿಸಬೇಡಿ. ಬೇರೆ ಯಾವುದಾದರೂ ಕಾಯಿಲೆ, ಅಥವಾ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದ ನಂತರವೇ ಚವನ್‌ಪ್ರಾಶ್ ಸೇವನೆ ಮಾಡಬಹುದು.