ಮಾವಿನ ಕಾಯಿ – 1
ಜೀರಿಗೆ ಪುಡಿ – 2 ಚಮಚ
ಕಾಳು ಮೆಣಸು – 2
ಕಪ್ಪು ಉಪ್ಪು – 2 ಚಮಚ
ಸಕ್ಕರೆ – 100-150 ಗ್ರಾಂ
ಪುದೀನಾ ಎಲೆ- 20-30
ಮಾವಿನ ಕಾಯಿ ಜ್ಯೂಸ್ ಮಾಡುವ ವಿಧಾನ:
ಮೊದಲು ಮಾವಿನ ಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿ. ಸಣ್ಣದಾಗಿ ಹೆಚ್ಚಿಕೊಂಡ ಮಾವಿನ ಕಾಯಿಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ.
ನಂತ್ರ ಮಿಕ್ಸಿ ಜಾರ್ ಗೆ ಬೇಯಿಸಿದ ಮಾವಿನಕಾಯಿ ಹೋಳು, ಪುದೀನಾ ಎಲೆ, ಸಕ್ಕರೆ, ಉಪ್ಪು ಹಾಗೂ ಕಾಳು ಮೆಣಸನ್ನು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಎರಡು ಲೋಟ ನೀರು ಹಾಕಿ ಜ್ಯೂಸ್ ಸಿದ್ದಮಾಡಿ. ತಣ್ಣನೆಯ ಜ್ಯೂಸ್ ಕುಡಿಯಬಯಸುವವರು ಇದಕ್ಕೆ ಐಸ್ ಹಾಕಿಕೊಳ್ಳಬಹುದು.