ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸುವ ಸರಳ ಮಾರ್ಗ 29-03-2023 6:10AM IST / No Comments / Posted In: Latest News, Health, Live News, Life Style ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅಂತ ನೋಡಿ. * ತೆಂಗಿನ ಎಣ್ಣೆಯನ್ನು ಸೌತೆಕಾಯಿ ಜ್ಯೂಸ್ ಜೊತೆ ಬೆರೆಸಿ ಬೆವರು ಗುಳ್ಳೆಗಳ ಮೇಲೆ ದಿನಕ್ಕೆ 2 ಬಾರಿ ಹಚ್ಚಿದರೆ ಗುಳ್ಳೆಗಳು ಶಮನವಾಗುತ್ತದೆ. * ಬೆವರು ಗುಳ್ಳೆಗಳಿಗೆ ಅಕ್ಕಿ ತೊಳೆದ ನೀರನ್ನು ಹಚ್ಚಿದರೆ ಗುಳ್ಳೆಗಳು ಗುಣವಾಗುತ್ತದೆ. * ರೋಸ್ ವಾಟರ್‌ಗೆ ಶ್ರೀಗಂಧದ ಪುಡಿ, ಲಾವಂಚದ ಪುಡಿ ಹಾಕಿ ಕಲಸಿ ಪೇಸ್ಟ್ ಮಾಡಿ ಬೆವರು ಗುಳ್ಳೆಗಳ ಮೇಲೆ ಲೇಪ ಮಾಡಿದರೆ ಗುಳ್ಳೆಗಳು ಕಡಿಮೆಯಾಗುತ್ತದೆ. * ಅಲೋವೆರಾ ಜೆಲ್ ಹಚ್ಚಿದರೂ ಬೆವರು ಗುಳ್ಳೆಗಳು ಮಾಯವಾಗುತ್ತದೆ. * ಕಸ್ತೂರಿ ಅರಿಶಿನ, ಮೆಂತ್ಯ, ಧನಿಯಾ, ಹೆಸರುಕಾಳನ್ನು ಪುಡಿ ಮಾಡಿ ಸ್ನಾನ ಮಾಡುವಾಗ ಸೋಪಿನ ಬದಲಾಗಿ ಈ ಪುಡಿಯನ್ನು ಬಳಸಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ. * ಬೆವರು ಗುಳ್ಳೆ ಆಗಿ ತುಂಬಾ ನವೆ ಇದ್ದರೆ ಬೇವಿನ ಸೊಪ್ಪಿನ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಹಚ್ಚಿದರೆ ನವೆ ಕಡಿಮೆಯಾಗಿ ಗುಳ್ಳೆಗಳು ಶಮನವಾಗುತ್ತದೆ. * ಪ್ರತಿದಿನ ತಣ್ಣೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆಗಳು ಮಾಯವಾಗುತ್ತದೆ. * ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ಜೊತೆ ಕಲಸಿ ಹಚ್ಚಿದರೆ ಬೆವರು ಗುಳ್ಳೆಗಳು ಮಾಯವಾಗುತ್ತದೆ. * ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರು ಗುಳ್ಳೆಗಳ ಮೇಲೆ 10 – 15 ನಿಮಿಷಗಳು ಇಟ್ಟರೂ ಗುಳ್ಳೆಗಳು ಶಮನವಾಗುತ್ತದೆ. * ಕರ್ಪೂರವನ್ನು ಬೇವಿನ ಎಣ್ಣೆ ಜೊತೆ ಪೇಸ್ಟ್ ಮಾಡಿ ಗುಳ್ಳೆಗಳ ಮೇಲೆ ಲೇಪನ ಮಾಡಿದರೆ ಗುಳ್ಳೆಗಳು ನಿವಾರಣೆಯಾಗುತ್ತದೆ.