ಬೇಸಿಗೆಯ ಬಿಸಿಲಿನಲ್ಲಿ ಓಡಾಡಿದಾಕ್ಷಣ ಕಣ್ಣಿನಲ್ಲಿ ತುರಿಕೆ, ನೀರು ಇಳಿಯುವುದು, ಕೆಂಪಗಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೇನು?
ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿತ್ಯ 8 ಗಂಟೆ ನಿದ್ದೆ ಮಾಡಿ ಹಾಗೂ ಸಾಕಷ್ಟು ನೀರು ಕುಡಿಯಿರಿ. ಕಣ್ಣಿನ ಕೆಳಭಾಗಕ್ಕೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಸೌತೆಕಾಯಿ ಹೋಳಿನಿಂದ ಕಣ್ಣಿಗೆ ಮಸಾಜ್ ಮಾಡುವುದು ಭಾರೀ ಒಳ್ಳೆಯದು.
ಧೂಮಪಾನಕ್ಕೆ ಶಾಶ್ವತವಾಗಿ ಗುಡ್ ಬೈ ಹೇಳಿ. ಕಣ್ಣುಗಳ ಇನ್ ಫೆಕ್ಷನ್ ದೂರ ಮಾಡಲು ರೋಸ್ ವಾಟರ್ ಬಳಸಿ. ಇದರ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ.
ನೆಲ್ಲಿಕಾಯಿ ಪುಡಿಗೆ ಜೇನು ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಲಿಗೆ ಚಿಟಿಕೆ ಅರಶಿನ ಪುಡಿ ಹಾಕಿ ಕುಡಿಯುವುದರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.