ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ.
ಇದಕ್ಕೆ ಅತ್ಯುತ್ತಮ ಪರಿಹಾರವೇ ಎಳನೀರು. ಹೌದು ಎಳನೀರು ಆಬಾಲವೃದ್ಧರಾಗಿ ಎಲ್ಲರಿಗೂ ಒಳ್ಳೆಯದು. ಬೇಸಿಗೆಯಲ್ಲಂತೂ ಇದು ದೇಹಕ್ಕೆ ಅತ್ಯುತ್ತಮ.
ಎಳನೀರು ಕುಡಿಯುವುದರಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುವುದನ್ನು ತಡೆಯಬಹುದು.
ಎಳನೀರಿನಲ್ಲಿ ವಿಟಮಿನ್ ಸಿ, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಪ್ರಮಾಣ ಹೆಚ್ಚಿರುವುದರಿಂದ ಕಡಿಮೆ ರಕ್ತದೊತ್ತಡವನ್ನು ತಡೆಯುತ್ತದೆ.
ಮಧುಮೇಹಿಗಳಿಗೆ ಎಳನೀರು ಅಮೃತ ಸಮಾನ.
ಜೀರ್ಣಕ್ರಿಯೆಗೂ ಎಳನೀರು ಅತ್ಯುತ್ತಮ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತೆ.
ತೂಕ ಇಳಿಕೆಗೂ ಎಳನೀರು ಒಳ್ಳೆಯದು.
ಯೂರಿನ್ ಇನ್ಫೆಕ್ಷನ್ ಅನ್ನೂ ಎಳನೀರು ತಡೆಯುತ್ತದೆ.