ಬಿಸಿಲಿನ ಝಳ ಹೆಚ್ಚುತ್ತಿದೆ. ಎಷ್ಟು ನೀರು ಕುಡಿದರೂ ತೀರದ ದಾಹ ಎಲ್ಲರನ್ನೂ ಬಸವಳಿಸಿದೆ. ಬೆವರಿನ ಮೂಲಕ ದೇಹದ ನೀರಿನಂಶ ಕಡಿಮೆಯಾಗಿ ಡಿಹೈಡ್ರೇಷನ್ ಸಮಸ್ಯೆ ಹೆಚ್ಚುತ್ತಿದೆ. ಮನೆಯಲ್ಲೇ ಕುಳಿತು ಕೆಲವು ಕೂಲ್ ಕೂಲ್ ಜ್ಯೂಸ್ ಗಳನ್ನು ತಯಾರಿಸಿ ಕುಡಿದು ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ಈ ಬೇಸಿಗೆಗೆ ಬೆಸ್ಟ್ ಜ್ಯೂಸ್ ಎಂದರೆ ಲಿಂಬೆಹಣ್ಣಿನದು. ಅದಕ್ಕೆ ಬೆಲ್ಲ, ಚಿಟಿಕೆ ಏಲಕ್ಕಿ, ಕಾಳುಮೆಣಸಿನ ಪುಡಿ ಬೆರೆಸಿ ಕುಡಿದರೆ ಬಾಯಾರಿಕೆಯೂ ಕಡಿಮೆಯಾಗುತ್ತದೆ, ದೇಹಕ್ಕೂ ಒಳ್ಳೆಯದು.
ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯುವುದರಿಂದ ಬೇಸಿಗೆಯ ಸಮಸ್ಯೆಗಳು ಕಾಡುವುದಿಲ್ಲ. ಎರಡು ದಿನಕ್ಕೊಮ್ಮೆ ಎಳನೀರು ಕುಡಿಯುವುದರಿಂದ ದೇಹದ ಉಷ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ನಿಂಬೆರಸ, ಸೌತೆಕಾಯಿ, ಪುದೀನಾ ಎಲೆ ನೆನೆಸಿದ ನೀರು ಕುಡಿಯುವುದು ಉತ್ತಮ. ಮಜ್ಜಿಗೆ ಕೂಡಾ ಬೇಸಿಗೆಗೆ ಬೆಸ್ಟ್ ಎನರ್ಜಿ ಡ್ರಿಂಕ್